ಮಹಿಳೆ ಫೋಟೋ ಪೋಸ್ಟ್ ಮಾಡಿ ಅಶ್ಲೀಲ ಪದ ಬರೆದು ಕಿರುಕುಳ
ಶಿವಮೊಗ್ಗ: ನಕಲಿ ಇನ್ ಸ್ಟಾಗ್ರಾಂ ಖಾತೆ ತೆರೆದು ಮಹಿಳೆಯ ಪೋಟೋ ಹಾಕಿ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ಸೊರಬದ ಕೆಇಬಿ ಕಾಲೋನಿ ನಿವಾಸಿಯಾಗಿರುವ 19 ವರ್ಷದ ಮೇಘರಾಜ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ನಕಲಿ ಇನ್ ಸ್ಟಾಗ್ರಾಂ ಖಾತೆ ತೆರೆದು ಮಹಿಳೆಯ ಪೋಟೋ ಹಾಕಿ ಪೋಟೋ ಮೇಲೆ ಅಶ್ಲೀಲ ಪದಗಳನ್ನು ಬರೆದು ಮಹಿಳೆಯ ಅಕೌಂಟ್ ಗೆ ಟ್ಯಾಗ್ ಮಾಡುತ್ತಿದ್ದ. ಈ ಕುರಿತು ಮಹಿಳೆ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪತ್ತೆಗಾಗಿ ಸಿಇ.ಎನ್. ಕ್ರೈಂ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗುರುರಾಜ್ ನೇತೃತ್ವದ ಸಿಬ್ಬಂದಿ ಒಳಗೊಂಡ ತಂಡ ರಚನೆ ಮಾಡಿ. ಆರೋಪಿ ಮೇಘರಾಜ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.