ಸರಣಿ ಗೆಲುವು ಸಂಪೂರ್ಣ ತೃಪ್ತಿ ತಂದಿದೆ; ವಿರಾಟ್ ಕೊಹ್ಲಿ
ಸರಣಿ ಗೆಲುವು ಸಂಪೂರ್ಣ ತೃಪ್ತಿ ತಂದಿದೆ; ವಿರಾಟ್ ಕೊಹ್ಲಿ
ಆಸ್ಟ್ರೇಲಿಯಾ ವಿರುದ್ಧ ಕಳೆದ ವರ್ಷ ಸೋಲು ಅನುಭವಿಸಿದ್ದ ನಮಗೆ ಈ ಬಾರಿ ಮೂರು ಪಂದ್ಯಗಳ ಸರಣಿ ಗೆದ್ದಿರುವುದು ಸಂಪೂರ್ಣ ತೃಪ್ತಿ ತಂದಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗಳ ಅಂತರದಲ್ಲಿ ಪ್ರಬಲ ಆಸ್ಚ್ರೇಲಿಯಾ ತಂಡವನ್ನು ಮಣಿಸಿ ಏಕದಿನ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿತು.
ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ಪಂದ್ಯದ ಆರಂಭದಲ್ಲಿಯೇ ಅನುಭವಿ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಗಾಯಗುಂಡ್ಡಿದ್ದು ತಂಡ ಕ್ಕೆ ಆಘಾತವಾಯಿತು. ಅವರ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಆರಂಭಿಕನಾಗಿ ಆಡಿದರು. ಉತ್ತಮ ಆರಂಭದ ಹೊರತಾಗಿಯೂ ರಾಹುಲ್ ವಿಕೆಟ್ ಒಪ್ಪಿಸಿದರು.
ನಾನು ಕ್ರೀಸ್ ಗೆ ಹೋದ ಬಳಿಕ ರೋಹಿತ್ ಶರ್ಮಾ ಬಳಿ ಮಾತನಾಡಿಕೊಂಡು ಎಚ್ಚರಿಕೆಯ ಹೆಜ್ಜೆ ಇಟ್ಟೆವು. ಆಸ್ಟ್ರೇಲಿಯಾ ವಿಕೆಟ್ ಗಾಗಿ ಹಾತೊರೆಯುತ್ತಿದ್ದು, ನಾವು ದೊಡ್ಡ ಜೊತೆಯಾಟವಾಡುವ ಅಗತ್ಯವಿದೆ ಎಂದು ಮಾತನಾಡಿಕೊಂಡೆವು ಎಂದು ಕೊಹ್ಲಿ ಹೇಳಿದರು.
ಮುಂದಿನ ಸರಣಿಗೂ ಕೆಎಲ್ ರಾಹುಲ್ ವಿಕೆಟ್ ಕೀಪರ್
ಇನ್ನು ಇದೇ ವೇಳೆ ಕೆಎಲ್ ರಾಹುಲ್ ಆಟವನ್ನು ಕೊಂಡಾಡಿದ ಕೊಹ್ಲಿ, ಈ ಪಂದ್ಯದ ಗೆಲುವಿನಲ್ಲಿ ರಾಹುಲ್ ಪಾತ್ರ ಪ್ರಮುಖವಾಗಿತ್ತು, ಕೇವಲ ಓರ್ವ ಬ್ಯಾಟ್ಸ್ ಮನ್ ಆಗಿ ಮಾತ್ರವಲ್ಲದೇ ರಾಹುಲ್ ವಿಕೆಟ್ ಕೀಪರ್ ಆಗಿಯೂ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಮುಂದಿನ ಕೆಲ ಸರಣಿಗಳಿಗೂ ಕೆಎಲ್ ರಾಹುಲ್ ರನ್ನೇ ವಿಕೆಟ್ ಕೀಪರ್ ಆಗಿ ಮುಂದುವರೆಸುವ ಇಂಗಿತವನ್ನು ಕೊಹ್ಲಿ ವ್ಯಕ್ತಪಡಿಸಿದರು.