ಏಪ್ರಿಲ್ 14 ನಂತರ ಮುಂದೇನು...?

ಮಹಾಮಾರಿ ಕೊರೊನಾ ಆಕ್ರಮಣದಿಂದ ದೇಶ 21 ದಿನಗಳ ಕಾಲ ಲಾಕ್ ಡೌನ್ ಆಗಿದೆ. 130 ಕೋಟಿ ಜನಸಂಖ್ಯೆಯ ಭಾರತ ಅಕ್ಷರಶಃ ಸ್ತಬ್ಧವಾಗಿದೆ. ವಾಹನಗಳಿಂದ ಕಿಕ್ಕಿರಿದು ತುಂಬಿರುತಿದ್ದ ರಸ್ತೆಗಳು ಬಿಕೋ ಎನ್ನುತ್ತೀವೆ. ದೇಶದ ಜನ ತಮ್ಮ ಮನೆಗಳಲ್ಲೇ
ದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಜನರ ಹಿತದ್ರಷ್ಠಿಯಿಂದ ಮೋದಿ ಕರೆ ನೀಡಿದ್ದ ಲಾಕ್ ಡೌನ್ ಅವಧಿ ಏಪ್ರಿಲ್ 14 ಕ್ಕೆ ಮುಗಿಯಲಿದೆ.ಆದರೆ ಈ ಕ್ಷಣಕ್ಕೆ ಪ್ರತಿಯೊಬ್ಬ ಭಾರತೀಯನಿಗೂ ಕಾಡುತ್ತಿರುವ ಪ್ರಶ್ನೆ ಅಂದ್ರೆ ಏಪ್ರಿಲ್ 14 ರ ನಂತರ ಮುಂದೇನು ಎನ್ನುವುದು. ಏಪ್ರಿಲ್ 14 ಕ್ಕೆ ಲಾಕ್ ಡೌನ್ ಮುಗಿಯುತ್ತಾ ಇಲ್ಲಾ ಲಾಕ್ ಡೌನ್ ವಿಸ್ತರಣೆಯಾಗುತ್ತಾ? ವಿಸ್ತರಣೆ ಆದ್ರೂ ಎಸ್ಟು ದಿನಗಳ ಕಾಲ ವಿಸ್ತರಣೆ ಆಗುತ್ತೆ ಎಲ್ಲದಕ್ಕೂ ಪ್ರಧಾನಿ ಮೋದಿಯೇ ಉತ್ತರಿಸಬೇಕು.

ಜನ ಒಮ್ಮೆಲೆ ರಸ್ತೇಗಿಳಿಯದಂತೆ ಎಚ್ಚರಿಕೆ ವಹಿಸಬೇಕಿದೆ.

ಇನ್ನು ಲಾಕ್ ಡೌನ್ ಬಳಿಕ ಗುರುವಾರ ಮೊದಲ ಬಾರಿಗೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ ಮೋದಿ ಲಾಕ್ ಡೌನ್ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಿದರು.

ಪ್ರಧಾನಿ ಮೋದಿ ನೀಡಿದ ಪ್ರಮುಖ ಸಲಹೆಗಳು ಇಲ್ಲಿವೆ...

*ಜನ ಒಮ್ಮೆಲೆ ರಸ್ತೆಗಿಳಿಯದಂತೆ ಎಚ್ಚರ ವಹಿಸಿ
* ಚಟುವಟಿಕೆಯನ್ನು ನಿಧಾನವಾಗಿ ಸಹಜ ಹಳಿಗೆ ತನ್ನಿ...
* ಕ್ರಷಿ ಊತ್ಪನಗಳ ಖರಿದಿಗೆ ಎಪಿಎಂಸಿ ಗಳ ಜೊತೆಗೆ ಪರ್ಯಾಯ ಮಾರ್ಗಗಳ ಹುಡುಕಾಟ..
* ಲಾಕ್ ಡೌನ್ ಹಿಂತೆಗೆತದ ಬಳಿಕ ಕೆಲವು ವಾರ ತಪಾಸಣೆ , ನಿಗಾ , ಕ್ವಾರಂಟೈನ್ ಮುಂದುವರಿಕೆ
*ಕೊರೊನಾ ಔಷಧಿಗಳ ಕೊರತೆಯಾಗದಂತೆ ಕ್ರಮ
* ವೈದ್ಯರ ಕೋರತೆಯಾದರೆ ಆಯುಷ್ ವೈದ್ಯರನ್ನು ಬಳಸಿಕೊಳ್ಳುವಂತೆ ಸೂಚನೆ.

ಹೀಗೆ ಕೊರೊನಾ ವಿರುದ್ಧ ಸಮರ್ಥ ಹೊರಾಟ ನಡೆಸಲು ಪ್ರಧಾನಿ ಮೋದಿ ರಾಜ್ಯಗಳಿಗೆ ಸಾಕಷ್ಟು ಸಲಹೆ ನೀಡಿದರು.

ಮರುದಾಳಿ ಸಾಧ್ಯತೆ ಮರೆಯಬೇಡಿ....

ಒಂದೂ ವೇಳೆ ಕೊರೊನಾ ನಿಯಂತ್ರಣಕ್ಕೆ ಬಂದು ಲಾಕ್ ಡೌನ್ ಹಿಂತೆಗೆದು ಕೊಂಡರು ಅದರ ಮರುದಾಳಿ ಸಾಧ್ಯತೆಯನ್ನು ರಾಜ್ಯಗಳು ಮರೆಯಬಾರದು ಎಂದು ಮೋದಿ ಸಲಹೆ ನೀಡಿದರು.
ಈಗಾಗ್ಲೇ ಜಗತ್ತಿನ ಹಲವು ರಾಷ್ಟ್ರಗಳು ಸೋಂಕಿನ  ಮರುದಾಳಿ ಅಪಾಯ ಎದುರಿಸುತ್ತಿವೆ. ಆದ್ದರಿಂದ ರಾಜ್ಯಗಳು ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ವಿಚಾರದಲ್ಲಿ ಕೇಂದ್ರದ ಜೊತೆ ರಾಜ್ಯಗಳು ಸಮನ್ವಯ ಸಾಧಿಸಬೇಕು ಎಂದಿದ್ದಾರೆ.