ಶಿವಮೊಗ್ಗದಲ್ಲಿ ನಡೆದ ಭೀಕರ ಸ್ಪೋಟ, ಘಟನೆ ಸಂಭವಿಸಿದ್ದು ಹೇಗೆ?
ನೆನ್ನೆ ನಡೆದ ಜಲೆಟಿನ್ ಸ್ಪೋಟಕ್ಕೆ ಇಡೀ ರಾಜ್ಯವೇ ಆತಂಕಗೊಂಡಿದೆ. ರಾಷ್ರ್ಟ ಮಟ್ಟದಲ್ಲೂ ಈ ವಿಷಯ ಹೆಚ್ಚು ಗಮನ ಸೆಳೆದಿದೆ. ಸುಮಾರು ೧೦:೨೦ ಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಭೂಕಂಪ ಕಾಣಿಸಿಕೊಂಡಿದ್ದು, ಇದರ ಧ್ವನಿಗೆ ಜನರು ನಿಗ್ಭರೆಗಾಗಿದ್ದಾರೆ. ಈ ಅವಘಡದ ಬಲಿಗೆ ಸಿಳುಕಿ ೨೦ ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಸುದ್ದಿ, ಜನರನ್ನು ಚಿಂತಾಜನಕರನ್ನಾಗಿ ಮಾಡಿದೆ. ಜಲೆಟಿನ್ ಸ್ಪೋಟದ ವಿಷಯ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ.
ಶಿವಮೊಗ್ಗದ ಹುಣಸಗೋಡಿನ ಪ್ರದೇಶದಲ್ಲಿ ಅಚಾನಕ್ಕಾಗಿ ಭೂ ಕುಸಿತ ಕಾಣಿಸಿಕೊಂಡಿದ್ದು, ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಭೀಕರವಾದ ಸ್ಪೋಟದ ಸದ್ದಿಗೆ ೧೦ ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಭೂ ಕಂಪನದ ವಿಚಿತ್ರವಾದ ಧ್ವನಿ ೨೦ ರಿಂದ ೩೦ ಕೀಮಿವರೆಗೂ ಕೇಳಿಸಿದ್ದು, ಸ್ಪೋಟ ಬಹಳ ಆಳವಾಗಿದ್ದ ಕಾರಣದಿಂದಾಗಿ ಕೆಲಸಗಾರರ ದೇಹಗಳು ಚೂರು-ಚೂರಾಗಿವೆ.
ಸರಿ ಸುಮಾರು ೫೦ ಡಬ್ಬಿಗಳಲ್ಲಿ ಸ್ಪೋಟಕ ವಸ್ತುಗಳನ್ನ ಲಾರಿಯಲ್ಲಿ ತುಂಬಿದ್ದರಿಂದ, ಲಾರಿಯು ಸಹ ಭಸ್ಮವಾಗಿದೆ ಎಂದು ಮೂಲಗಳ ಪ್ರಕಾರ ಹೇಳಲಾಗುತ್ತಿದೆ. ಘಟನೆ ಬೆಳಕಿಗೆ ಬರುತ್ತಿದ್ದ ಹಾಗೆ, ಪೋಲಿಸರಿಗೆ ಮಾಹಿತಿ ಬಂದಿದೆ. ಮಾಹಿತಿ ಬರುತ್ತಿದ್ದ ಹಾಗೆ ಶಿವಮೊಗ್ಗದ ಜಿಲ್ಲಾಧಿಕಾರಿಗಳು ಮತ್ತು ವರಿಷ್ಠಾಧಿಕಾರಿಗಳು ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೆ ಸಮಯದಲ್ಲಿ, ಅಕ್ರಮವಾದ ಗಣಿಗಾರಿಕೆ ಚಟುವಟಿಕೆ ನಡೆಯುತ್ತಿದೆ ಎಂದು ಸ್ಥಳೀಯ ವ್ಯಕ್ತಿಗಳು ಆರೋಪಿಸಿದ್ದು, ಪೋಲಿಸರು ಹಾಗು ಆರೋಪಿಸಿದ ವ್ಯಕ್ತಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಘಟನೆ ಸಂಭವಿಸಿದ ಜಾಗದಿಂದ ೨ ಕೀಮಿ ದೂರವಿರುವ ಹಳ್ಳಿಯ ಮನೆಗಳಿಗೂ ಸಹ ಹಾನಿ ಉಂಟಾಗಿದೆ. ಮನೆಗಳ ಕಿಟಕಿ, ಬಾಗಿಳುಗಳು ಮುರಿದು ಹೋಗಿವೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟ ವ್ಯಕ್ತಿಗಳಾದ, ಗಣಿ ಒಡೆಯ ಸುಧಾಕರ್ ಹಾಗೂ ಇವರ ಜೊತೆ ಪಾಲನ್ನು ಹೊಂದಿರುವ ಲಂಬೂ ನರಸಿಂಹ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದದಾರೆ.
ಶಿವಮೊಗ್ಗದ ಘಟನೆಯ ಕುರಿತು ನರೇಂದ್ರ ಮೋದಿ ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿ ಸಾವನಪ್ಪಿದ ಪರಿವಾರದ ಸದ್ಯಸರಿಗೆ ಸಂತಾಪವನ್ನು ಸೂಚಿಸಿದ್ದು, ಈ ಪ್ರಕರಣಗಳಿಗೆ ತೀವ್ರವಾದ ತನಿಖೆ ಅಚ್ಚುಕಟ್ಟಾಗಿ ನಡೆಯಬೇಕೆಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.