ಕೊಲ್ಕತ್ತಾದಲ್ಲಿ ತಲೆ ಎತ್ತಲಿದೆ ನೂರು ಅಡಿಯ ಆಧ್ಯಾತ್ಮ ಗುರುವಿನ ಪ್ರತಿಮೆ

ಭಾರತದಲ್ಲಿ ಬೃಹದಾಕಾರದ ಬುದ್ಧನ ಪ್ರತಿಮೆ ಈಗ ಕಲ್ಕಾತ್ತಾದಲ್ಲಿ ಪ್ರತಿಸ್ಥಾಪನೆ ಮಾಡಲು ಸಕಲ ಸಿದ್ದತೆಗಳು ನಡೆಯುತ್ತಿದೆ. ಬೌದ್ದ ಧರ್ಮದ ಆಧ್ಯಾತ್ಮದ ಅರಿವನ್ನು ದೇಶಾದ್ಯಂತ ಸಾರಿದ ಆಧ್ಯಾತ್ಮಿಕ ಗುರು ಗೌತಮ ಬುದ್ದ. ಗೌತಮ ತನ್ನ ಬೋಗ ಜೇವನವನ್ನು ತ್ಯಜಿಸಿ ಜ್ನ್ಯಾನೋದಯದತ್ತ ಚಲಿಸಿದ ನಂತರ ಬುದ್ದ ಆಗಿರುವ ಕಥೆ ನಿಮಗೆಲ್ಲ ಗೊತ್ತೇ ಇದೆ.

ಆಧ್ಯಾತ್ಮದ ಸತ್ವವನ್ನು  ಜನರಿಗೆ ಬೋಧಿಸಿದ ಬೌದ್ದ ಗುರು ಭಗವಾನ್‌  ಬುದ್ಧ ನ  ಬೃಹತ್‌ ಗುರುವಿನ ಪ್ರತಿಮೆ ಭಾರತದಲ್ಲಿ ತಲೆ ಎತ್ತಲಿರುವುದು ಬೌದ್ಧ ಅನುಯಾಯಿಗಳಿಗೆ ಸಂತಸದ ವಿಚಾರವಾಗಿದೆ. ಕೊಲ್ಕತ್ತಾದ ಗೋಸ್ಪಾರ್,ಭಾರಾ ನಗರದಲ್ಲಿರುವ ನೈನಂ ಬಂಧ್ನಾಮ್ ಮೈಧಾನದಲ್ಲಿ ಪುತ್ಥಳಿ ನಿರ್ಮಾಣದ ಕೆಲಸ ಭರದಿಂದ ಸಾಗಿದೆ. ಮುಂದಿನ ವರ್ಷದ, ಬುದ್ಧ ಪೂರ್ಣಿಮ ದಿನದಂದು  ಬೋಧ್ ಗಯಾ ಮಂದಿರದಲ್ಲಿ ನೂರು ಅಡಿಯ ಬುದ್ಧನ ಪ್ರತಿಮೆ, ಸ್ಥಾಪನೆ ಆಗಲಿದೆ.

ಒಂದೊಂದೇ ವಿಗ್ರಹದ ಪ್ರತ್ಯೇಕ ಭಾಗಗಳನ್ನು ಭಾರಾನಗರದಲ್ಲಿ ತಯಾರಿಸಲಾಗಿದ್ದು, ನಂತರ ಇದನ್ನು ಬೋಧ್ ಗಯಾ ಸ್ಥಳಕ್ಕೆ ತಲುಪಿಸಲಾಗುತ್ತದೆ. ದೇಶದಲ್ಲೇ ಅತಿ ಎತ್ತರವಾದ ಬುದ್ಧನ ಪ್ರತಿಮೆ ಇದಾಗಲಿದೆ ಎಂದು ಅಂತಾರಾಷ್ಟ್ರೀಯ ಬೌದ್ಧ ಕಲ್ಯಾಣದ  ಕಾರ್ಯಕರ್ತರು ತಿಳಿಸಿದ್ದಾರೆ.

ಖ್ಯಾತ ಶಿಲ್ಪಿ ಮಿಂಟು ಪಾಲ್ ಪುತ್ಥಳಿ ಕೆತ್ತನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಫೈಬರ್ ಗಾಜನ್ನು ಬಳಸಿಕೊಂಡು  ಕೆತ್ತನೆ ಮಾಡುತ್ತಿರುವುದು ವಿಶೇಷ.