ಗ್ರಾಮೀಣ ಭಾಗದ ಜನರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ....

ಜನಸ್ನೇಹಿ ಆಡಳಿತಕ್ಕೆ ಸರ್ಕಾರ ಮುಂದಾಗಿದ್ದು, ಜಿಲ್ಲಾಧಿಕಾರಿಗಳ ಹಳ್ಳಿ ವಾಸ್ತವ್ಯಕ್ಕೆ ಕಂದಾಯ ಸಚಿವರು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ ಎಂಬ ವಿನೂತನ ಕಾರ್ಯಕ್ರಮ ರೂಪಿಸಲಾಗಿದ್ದು ಜನಸಾಮಾನ್ಯರಿಗೆ ದಿನವೂ ಎದುರಾಗುವ 20 ಸಮಸ್ಯೆಗಳನ್ನು ನಿವಾರಿಸಲು ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ಜನಸಾಮಾನ್ಯರ ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆ ತಲುಪಿಸಲು ಮತ್ತು ಕಂದಾಯ ಇಲಾಖೆಯ ಸೌಲಭ್ಯ ಪಡೆಯಲು ಜನ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಜನಸ್ನೇಹಿ ಆಡಳಿತಕ್ಕೆ ಅಶೋಕ್ ಸೂಚನೆ ನೀಡಿದ್ದು, ಜಿಲ್ಲಾಧಿಕಾರಿಗಳ ಹಳ್ಳಿ ವಾಸ್ತವ್ಯಕ್ಕೆ ಆದೇಶಿಸಿದ್ದಾರೆ.
ಹಳ್ಳಿ ವಾಸ್ತವ್ಯದ ವೇಳೆ ಶಾಲೆ ಬಿಟ್ಟ ಮಕ್ಕಳನ್ನು ಪುನಹ ಶಾಲೆಗೆ ಕರೆತರುವುದು, ಸ್ಮಶಾನಕ್ಕೆ ಜಾಗ ಮೀಸಲು, ಪೌತಿ ಖಾತೆ, ಜಾತಿ ಪ್ರಮಾಣಪತ್ರ, ಮೊದಲಾದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಲಿದೆ

ಜಿಲ್ಲಾಧಿಕಾರಿಗಳು ಹಳ್ಳಿ ವಾಸ್ತವ್ಯದ ವೇಳೆ 20 ಕಾರ್ಯಗಳಿಗೆ ಆದ್ಯತೆ ನೀಡುವಂತೆ ತಿಳಿಸಲಾಗಿದೆ.
ಶಾಲೆ, ಪಂಚಾಯಿತಿ, ಕಾಲೇಜು, ಅಂಗನವಾಡಿ ಮತ್ತು ಗ್ರಾಮಲೆಕ್ಕಾಧಿಕಾರಿ ಕಚೇರಿಗಳಿಗೆ ಮೂಲಸೌಕರ್ಯ, ಸ್ಮಶಾನಕ್ಕೆ ಸರ್ಕಾರಿ ಜಮೀನು ಒದಗಿಸುವುದು, ಕುಡಿಯುವ ನೀರಿನ ಸಮಸ್ಯೆ ಪರಿಹಾರ, ಸರ್ಕಾರಿ ಜಮೀನು ಒತ್ತುವರಿ ತೆರವು, ಪಡಿತರ ವ್ಯವಸ್ಥೆ ಪರಿಶೀಲನೆ, ಸಾಮಾಜಿಕ ಭದ್ರತಾ ಯೋಜನೆಯಿಂದ ಹೊರಗುಳಿದವರನ್ನು ಗುರುತಿಸುವುದು, ಪೌತಿ ಖಾತೆ ಬದಲಾವಣೆ, ಮೊದಲಾದವುಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.