ಅಮೆರಿಕಾದಲ್ಲಿ ಭುಗಿಲೆದ್ದ ಹಿಂಸಾಚಾರ : ಮಂಡಿಯೂರಿ ಪ್ರತಿಭಟನೆಕಾರರ ಕ್ಷಮೆಯಾಚಿಸಿ ಪೊಲೀಸರು.....
ಆಫ್ರಿಕಾ ಮೂಲದ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಹತ್ಯೆಯಿಂದ ಅಮೆರಿಕದಲ್ಲಿ ಹೊತ್ತಿಕೊಂಡಿರುವ ಪ್ರತಿಭಟನೆ ಕಿಚ್ಚು ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಅಮೆರಿಕಾದ ಪೋಲೀಸರ ದೌರ್ಜನ್ಯ ಖಂಡಿಸಿ ಕಪ್ಪು ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.ಅಮೇರಿಕಾದ 25 ಕ್ಕೂ ಹೆಚ್ಚು ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಈ ನಡುವೆ ಪ್ರತಿಭಟನೆಕಾರರನ್ನು ನಿಯಂತ್ರಿಸಲು ಸೇನೆಯನ್ನು ಕರೆಸಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆ ಪ್ರತಿಭಟನೆಕಾರರನ್ನು ಮತ್ತಷ್ಟು ಕೆರಳಿಸಿತ್ತು.
ಪರಿಸ್ಥಿತಿಯ ಗಂಭೀರತೆ ಅರಿತ ಮಿಯಾಮಿ ನಗರದ ಪೊಲೀಸರು ಪ್ರತಿಭಟನೆಯನ್ನು ಶಾಂತಗೊಳಿಸುವ ದೃಷ್ಟಿಯಿಂದ ಪ್ರತಿಭಟನೆ ನಡೆಸುತ್ತೀರುವವರ ಬಳಿ ಮಂಡಿಯೂರಿ ಕ್ಷಮೆ ಯಾಚಿಸಿದ್ದಾರೆ. ಸದ್ಯ ಪೋಲಿಸರು ಮಂಡಿಯೂರಿ ಕ್ಷಮೆಯಾಚಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೊತೆಗೆ ಪ್ರತಿಭಟನೆಯನ್ನು ಶಾಂತಗೊಳಿಸುವ ಬದಲು ಮತ್ತಷ್ಟು ಹೆಚ್ಚಾಗುವಂಥ ವಿವಾದಾತ್ಮಕ ಹೇಳಿಕೆ ಕೊಡುತ್ತಿರುವ ಡೊನಾಲ್ಡ್ ಟ್ರಂಪ್ ಗೂ ಅಮೆರಿಕಾ ಪೋಲಿಸರು ಎಚ್ಚರಿಕೆ ನೀಡಿದ್ದು ಸಾಧ್ಯವಾದರೆ ರಚನಾತ್ಮಕ ಮಾತನಾಡಿ ಇಲ್ಲಾ ಸುಮ್ಮನಿದ್ದು ಬಿಡಿ ಎಂದು ಹೇಳಿದ್ದಾರೆ.