
ಟೆಸ್ಲಾ ಸಂಸ್ಥೆಯವರಿಂದ ನೂತನವಾದ ಪ್ರಯೋಗ, ಇದರ ವಿಶೇಷತೆಗಳೇನು?
ಮೊದಲನೆ ಬಾರಿಗೆ ಟೆಸ್ಲಾ ಸಂಸ್ಥೆಯವರು ನೂತನವಾದ ತಂತ್ರಜ್ನ್ಯಾನ ಅಳವಡಿಸಿಕೊಂಡಿರುವ ಮಾಡೆಲ್ ಎಸ್ ಕಾರ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದಾರೆ. ತಾಜಾತನದ ವಿನ್ಯಾಸ, ಹುಚ್ಚಿಡಿಸುವಂತಹ ಸ್ಟಿಯರಿಂಗ್ ವೀಲ್, ಹೊಸದಾದ ಪವರ್ ಟ್ರೈನ್ ನೊಂದಿಗೆ ಬಂದಿರುವುದು ಕಾರ್ ಪ್ರಿಯರಿಗೆ ಮದ ಏರಿಸುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ.
ಮಾಡೆಲ್ ಎಸ ಇಂಟೀರಿಯರ್ ಫ್ರೆಶ್ ಕುರಿತು ನಿಮಗೆ ಹೇಳುತ್ತಲೇ ಬಂದಿದ್ವಿ, ಕೊನೆಗೂ ಈ ಮಾಡೆಲ್ ನ ಹೊಸ ಬದಲಾವಣೆ ಮತ್ತು ಬೆಲೆಯೊಂದಿಗೆ ನಿಮ್ಮ ಮುಂದೆ ಬಂದು ನಿಂತಿದೆ. ಕಾರ್ ನ ವಿನ್ಯಾಸ ನವೀಕರಿಸಲಾಗಿದ್ದು, ಇನ್ನು ಅಧಿಕವಾದ ವಿಶೇಷತೆಗಳನ್ನು ಸೇರಿಸಲಾಗಿದೆ.
ಟೆಸ್ಲಾ ಸಂಸ್ಥೆಯ ಮಾಡೆಲ್ ಎಸ್ ಅಂತಿಮವಾಗಿ ತನ್ನ ಮುಖವನ್ನು ಬಹಿರಂಗ ಪಡಿಸಿದೆ. ಇದರ ಮುಖ್ಯ ಆಕರ್ಷಣೆಯ ನೋಟವೆಂದರೆ ಇಂಟೀರಿಯರ್ ಡಿಸೈನ್. ಇನ್ನು ಡಿಸ್ಪ್ಲೇ ವಿಷಯಕ್ಕೆ ಬಂದರೆ, ೨೨೦೦/೧೩೦೦ ರೆಸೊಲ್ಯೂಷನ್, ವಿಧ ವಿಧವಾದ ಬಣ್ಣದ ಜಗತ್ತು ಮತ್ತು ಬಲ-ಎಡ ಭಾಗದಲ್ಲಿ ತಿಲ್ಟ್\ ಕಿಟಕಿಗಳು, ಟಚ್ ಸ್ಕ್ರೀನ್ ಸೌಲಭ್ಯ. ಎರಡನೇ ಟಚ್ ಸ್ಕ್ರೀನ್ ಡಿಸ್ಪ್ಲೇ ಚಾಲಕನ ಮಾರ್ಗ ಸೂಚಿಸಿದರೆ, ಮೂರನೇ ಡಿಸ್ಪ್ಲೇ ಅಪರೂಪದ ಪ್ರಯಾಣಿಕರ ಮನೋರಂಜನೆಗೆಂದು ಬಳಸಿಕೊಳ್ಳಬಹುದು.
ಟೆಸ್ಲಾ ಮಾಡೆಲ್ ಎಸ್ ನ ಪ್ರಮುಖ ಅಂಶಗಳು
೧. 22 ಸ್ಪೀಕರ್ ಆಡಿಯೋ, ಹೊರಗಿನ ಧ್ವನಿಯನ್ನು ತೆಗೆಯುತ್ತದೆ.
೨. ವಯರ್ ಲೆಸ್ ಕಂಟ್ರೋಲಿಂಗ್
೩. ಪ್ರಯಾಣಿಕರಿಗೆ ಕೂಡುವುದಕ್ಕೆ ವಿಶಾಲವಾದ ಜಾಗ, ಗುಣಮಟ್ಟದ ಸ್ಟಿಯರಿಂಗ್, ವಿಂಡೋ ಶೀಲ್ಡ್
೪. ಅಲ್ಟ್ರಾ ವಯಲೆಟ್ ಹಾಗೂ ಇನ್ಫ್ರಾರೆಡ್ ಕಿರಣಗಳಿಂದ ಗಾಜಿಗೆ ರಕ್ಷಣೆ
೫. ಹೋಗಬೇಕಾದ ದಾರಿ ತಲುಪಿದ ತಕ್ಷಣ ಡೋರ್ಸ್ ಆಟೋಮ್ಯಾಟಿಕ್ ಆಗಿ ತೆರೆದುಕೊಳ್ಳುತ್ತದೆ
೬. ಸ್ಟಿಯರಿಂಗ್ ಹೆಚ್ಚು ಗಮನ ಸೆಳೆಯುತ್ತದೆ, ಟೆಸ್ಲಾ ಇದನ್ನು ಯೋಕೆ ಸ್ಟಿಯರಿಂಗ್ ಎನ್ನುತ್ತಾರೆ
೭. ೨೮ ಅಡಿ ಕಾರ್ಗೋ ಜಾಗ
೮. ಲೈವ್ ಟ್ರಾಫಿಕ್ ನ ನೋಟ
೯. ಇಂಟರ್ನೆಟ್ ಬ್ರೌಸಿಂಗ್, ಹಾಡುಗಳನ್ನ ಕೇಳುವ ಸೌಖರ್ಯ
ಪ್ರಥಮ ಲುಕ್ ನಲ್ಲಿ ಟೆಸ್ಲಾ ಮಾಡೆಲ್ ಎಸ್, ಇಂಟೀರಿಯರ್ ವಿನ್ಯಾಸದೊಂದಿಗೆ ಕಂಗೊಳಿಸುತ್ತಿದೆ. ಈಗ ಕಾರ್ ನ ಮಾರುಕಟ್ಟೆಯ ಬೆಲೆ ೮೦,೦೦೦ ಡಾಲರ್. ಕೇವಲ ಕಾರ್ ನ ಪ್ರದರ್ಶನದ ಕಡೆಗೆ ಗಮನ ಹರಿಸಿ ಸುಸ್ತಾಗಿದ್ದು, ತಾಜಾತನದ ಪ್ರಯೋಗವನ್ನ ಟೆಸ್ಲಾದವರು ಮಾಡಿದ್ದಾರೆ.
ಬರಹ: ಹೆಚ್. ಶ್ರೀಹರ್ಷ