ನಿರ್ಭಯಾ ಅಪರಾಧಿಗಳ ಕುಣಿಕೆ ಮತ್ತೆ ಮುಂದೂಡಿಕೆಯಾಗಲಿದೆಯೇ...?
ದೆಹಲಿ : ಇಂದು ದೆಹಲಿ ಹೈಕೋರ್ಟ್ ನಲ್ಲಿ ನಿರ್ಭಯಾ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ಕುರಿತಾದ ಅರ್ಜಿಯ ವಿಚಾರಣೆ ನಡೆಸಿದ್ದು, ಆಪ್ ಸರ್ಕಾರ ಹಾಗೂ ತಿಹಾರ್ ಜೈಲು ಅಧಿಕಾರಿಗಳನ್ನು ಕೋರ್ಟ್ ತರಾಟೆಗೆ ತೆಗೆದು ತೆಗೆದುಕೊಂಡಿದೆ , ವ್ಯವಸ್ಥೆಯು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಶೋಷಣೆಗೆ ಒಳಗಾಗಬಲ್ಲ ದುರ್ಬಲ ಕಾನೂನು ರೂಪಿಸಿದ್ದೀರಿ ಎಂದು ಚಾಟಿ ಬೀಸಿತು.
ಆಪ್ ಸರ್ಕಾರ ಹಾಗೂ ತಿಹಾರ್ ಜೈಲಿನ ಕಾರಾಗ್ರಹ ಅಧಿಕಾರಿಗಳಿಗೆ ದೆಹಲಿ ಕೋರ್ಟ್ ಆದೇಶದಂತೆ ಜನೆವರಿ 22 ರಂದು ಗಲ್ಲು ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರ ಮಾತನಾಡಿ ಕಾರಗ್ರಹ ನಿಯಮಾವಳಿಯ ಪ್ರಕಾರ ಒಂದೇ ಪ್ರಕರಣದಲ್ಲಿ ಒಬ್ಬರಿಗಿಂತ ಹೆಚ್ಚು ಜನರಿಗೆ ಮರಣದಂಡನೆ ಜಾರಿಯಾಗಿದ್ದರೆ, ಅಂಥ ಸಂಧರ್ಭದಲ್ಲಿ ಯಾರೊಬ್ಬರು ಕ್ಷಮಾದಾನ ಅರ್ಜಿ ಸಲ್ಲಿಸಿದ್ದರೆ, ಆ ಅರ್ಜಿ ತಿರಸ್ಕೃತವಾಗದ ಹೊರತು ಆ ಪ್ರಕರಣದ ಉಳಿದ ಅಪರಾಧಿಗಳಿಗೂ ಗಲ್ಲು ಶಿಕ್ಷೆ ವಿಧಿಸುವಂತಿಲ್ಲ ಎಂದು ಹೇಳಿದರು.
ಇನ್ನು ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಮನ್ ಮೋಹನ್ ಹಾಗೂ ಸಂಗೀತಾ ಸೆಹಗಲ್, ನಿಮ್ಮ ನಿಯಮಾವಳಿಗಳಲ್ಲಿ ತಪ್ಪಿದೆ. ನಿಯಮಾವಳಿಗಳನ್ನು ರಚಿಸುವಾಗ ನ್ಯಾಯ ಪ್ರಕ್ರಿಯೆ ವಿಳಂಬವಾಗಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಇನ್ನು ಡೆತ್ ವಾರೆಂಟ್ ಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ದೆಹಲಿ ಹೈಕೋರ್ಟ್ , ಜ. 22 ರಂದು ನಾಲ್ಕು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ತನ್ನ ಈ ಹಿಂದಿನ ಆದೇಶ ಎತ್ತಿ ಹಿಡಿಯಿತು.