ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ ಡೌನ್ ಸಂಭವ
ದೇಶದಲ್ಲಿ ಕರೊನಾದ ಎರಡನೆಯ ಅಲೆ ಶುರುವಾಗುವ ಎಲ್ಲಾ ಲಕ್ಷಣಗಳು ಗೊಚರಿಸುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕರೊನಾ ಪ್ರಕರಣಗಳು ದಿನೇ ದಿನೇ ಗಣನೀಯವಾಗಿ ಹೆಚ್ಚಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮಹರಾಷ್ಟ್ರ ಮುಖ್ಯ ಮಂತ್ರಿಗಳಾದ ಉದ್ದವ್ ಠಾಕ್ರೆ ರಾಜ್ಯದ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ರವಿವಾರ ಸಮಾಜಿಕ ಜಾಲತಾಣದ ಮೂಲಕ ೩೦ ನಿಮಿಷಗಳ ಕಾಲ ಮಾತನಾಡಿದ ಅವರು “ ರಾಜ್ಯ ಈಗ ಕರೊನಾದ ಎರಡನೆ ಅಲೆಯ ಹೊಸತ್ತಿಲಲ್ಲಿದೆ. ಈ ಸಂದರ್ಬದಲ್ಲಿ ರಾಜ್ಯದ ಜನತೆ ಹೆಚ್ಚು ಜವಬ್ದಾರಿಯುತವಾಗಿರ ಬೇಕು. ಮತ್ತೂಮ್ಮೆ ಲಾಕ್ ಡೌನ್ ಬೇಕೋ ಬೇಡವೋ ನನಗೆ ನಿರ್ಧರಿಸಿ. ನೀವು ಎಷ್ಟು ಜವಬ್ದಾರಿಯುತವಾಗಿ ನಡೆದು ಕೊಳ್ಳುತ್ತೀರೊ ಅದನ್ನ ನೋಡಿ ನಾನು ನಿರ್ಣಯ ಕೈಗೊಳ್ಳುತ್ತೆನೆ. ಮುಂದಿನ ೮ ದಿನಗಳ ಕಾಲ ಎಲ್ಲಾ ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳು, ರ್ಯಾಲಿಗಳು, ಹಾಗು ಸಾರ್ವಜನಿಕ ಹೋರಾಟಗಳಿಗೆ ನಿರ್ಬಂಧ ಹೇರಲಾಗಿದೆ. ಈ ೮ ದಿನಗಳ ಕರೊನಾ ಪ್ರಕರಣಗಳನ್ನ ಗಮನಿಸಿ ಲಾಕ್ ಡೌನ್ ನಿರ್ಧರಿಸಲಾಗುತ್ತದೆ. ಎಂದರು.
ಅಮರಾವತಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸೋಮವಾರದಿಂದ ಲಾಕ್ ಡೌನ್ ವಿಧಿಸಲಾಗಿದೆ. ಕಳೆದ ತಿಂಗಳು ನಡೆದ ಗ್ರಾಮ ಪಂಚಾಯತ್ ಚುನಾವಣೆ ಕೊಡ ಕರೊನಾ ಪ್ರಕರಣಗಳು ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟರು. ಎಲ್ಲಾ ಪಕ್ಷಗಳು ತಮ್ಮ ತಮ್ಮ ಪಕ್ಷ ವಿಸ್ತರಣೆ ಹಾಗು ಬಲವರ್ಧನೆಗೆ ಶ್ರಮಿಸುತ್ತಿವೆ ಆದರೆ ಈಗ ಕರೊನ ತಡೆಗಟ್ಟುವಲ್ಲಿ ಒಗ್ಗೂಡಿ ಶ್ರಮಿಸಬೇಕು ಎಂದು ಹೇಳಿದರು.
ಜನರು ಸುರಕ್ಷಿತ ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು, ಮಾಸ್ಕ ಬಳಸಿ , ಹಾಗು ಸ್ಯಾನಿಟೈಸರ್ ಬಳಕೆಯಿಂದ ಕೊವಿಡ್‌ನಿಂದ ಸುರಕ್ಷಿತವಾಗಿರಿ ಎಂದರು.
ವರದಿ: ಪ್ರೀತಿಕಾ ಹೆಗ್ಡೆ