ಜನವರಿ 17 ರ ನಂತರ ಭಾರತದಲ್ಲಿ ಆರಂಭವಾಗಲಿದೆ ಇಂಟರ್ನೆಟ್ ಯುಗ....

ಈಗಾಗಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಇಡೀ ವಿಶ್ವವೇ ಭಾರತ ಸಂವಹನ ಕ್ಷೇತ್ರದಲ್ಲಿ ಮಾಡಿದ ಪ್ರಗತಿ ಕಂಡು ಬೆಕ್ಕಸ ಬೆರಗಾಗಿದೆ. ಈಗ ಜನೆವರಿ 17 ರ ನಂತರ ಇಂಟರ್ನೇಟ್ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲನ್ನು ಸಾಧಿಸಲು ಹೊರಟಿದೆ.

ಜನೆವರಿ 17 ರ ನಂತರ ಭಾರತದಲ್ಲಿ  ಇಂಟರ್ ನೆಟ್ ವೇಗ ಹೆಚ್ಚಾಗಲಿದೆ. ಭಾರತದ ಯಾವೆಲ್ಲಾ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಬರುತ್ತಿಲ್ವವೋ ಅಲ್ಲೇಲ್ಲಾ ನೆಟ್ ವರ್ಕ್ ಬರಲಿದೆ.ಇದಕ್ಕೆ ಕಾರಣ ನಮ್ಮ ಹೆಮ್ಮೆಯ ಇಸ್ರೋ.

ಹೌದು, ಇದೇ ಜನೇವರಿ 17 ರಂದು ಇಸ್ರೋ ಜಿಸ್ಯಾಟ್ -30 ಉಪಗ್ರಹವನ್ನು ಉಡಾವಣೆ ಮಾಡುತ್ತಿದೆ. ಈ ಉಪಗ್ರಹದ ಉಡಾವಣೆಯ ನಂತರ ಭಾರತದ ಸಂವಹನ ಕ್ಷೇತ್ರ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಹಾಗೂ ದೇಶದ ಎಲ್ಲಾ ಪ್ರದೇಶದಲ್ಲೂ ಮೊಬೈಲ್ ನೆಟ್ ವರ್ಕ್ ಲಭ್ಯವಾಗಲಿದೆ.

ಇಸ್ರೋ ಸಂಸ್ಥೆಯ ಜಿಸ್ಯಾಟ್ - 30 ಉಪಗ್ರಹ ಇದೇ ಜನೇವರಿ 17 ರಂದು ಬೆಳಗಿನ ಜಾವ 2 :35 ರ ಸುಮಾರಿಗೆ ಫ್ರೆಂಚ್ ನ ಗಯೆನಾ ಕೊರೆವು ಲಾಂಚ್ ಪ್ಯಾಡ್ ನಿಂದ ಗಗನಕ್ಕೆ ಚಿಮ್ಮಲಿದೆ.