ಪಿಯುಸಿ ಎಸ್. ಎಸ್.‌ ಎಲ್.‌ ಸಿ‌. ಪರೀಕ್ಷೆ ಮಹೂತ೯

ವರ್ಷದಿಂದ ಆರಂಭವಾದ ಪಿಯುಸಿ ಮತ್ತು ಎಸ್ಸ್‌ಸ್ಸೆಲ್ಸಿ ತರಗತಿಗಳು ಉತ್ಸಾಹದಿಂದ ಸಾಗುತ್ತಿವೆ. ಅದಕ್ಕೆ ವಿದ್ಯಾರ್ಥಿಗಳು ಸಾತ್ ಕೊಡುತ್ತಿದ್ದು,  ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ತನ್ನ ಚಟುವಟಿಕೆಗಳನ್ನು ನಡಿಸುತ್ತಿದೆ . ಪಿಯುಸಿ ಪರೀಕ್ಷೆಯನ್ನು ಮೇ ಎರಡನೇ ವಾರ ಹಾಗೂ ಎಸ್ಸ್‌ಸ್ಸೆಲ್ಸಿ ಪರೀಕ್ಷೆಯನ್ನು ಜೂನ್‌ ಮೊದಲವಾರ ನಡೆಯುತ್ತವೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ ತಿಳಿಸಿದ್ದಾರೆ .


 

1ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ, ಪರೀಕ್ಷೆಯನ್ನು ನಡೆಯಿಸಿ ಸರಳ ಮೌಲ್ಯ ಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗುತ್ತದೆ . ಪಿಯುಸಿ, ಎಸ್ಸ್ ಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಹಿತ ದೃಷ್ಠಿಯಿಂದ ಇರುವ 140 ದಿನಗಳ ಅವಧಿಯಲ್ಲಿ,  ಕಲಿಕೆಗೆ ಸರಳವಾಗುವಂತೆ ಪಠ್ಯಪುಸ್ತಕದ ವಿಷಯವನ್ನು ಕಡಿತಗೊಳಿಸಿ ಅಂತಿಮ ಆದೇಶ ಹೊರಡಿಸಲಾಗಿದೆ. .ಈ ವಿವರಗಳನ್ನು, ರಾಜ್ಯದ ಎಲ್ಲಾ ಶಾಲೆಗಳಿಗೂ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು .

1ರಿಂದ 9 ನೇ ತರಗತಿಯ ಮಕ್ಕಳ ಪಠ್ಯ ಪುಸ್ತಕದ ವಿಷಯವನ್ನು ಯಾವುದೇ ರೀತಿ ಕಡಿತ ಮಾಡುವ ಪ್ರಸ್ತಾಪವಿಲ್ಲ ಎಂದು ಹೇಳಲಾಗಿದೆ.

ವರದಿ : ಬಸವರಾಜ ಹೂಗಾರ ಗದಗ