ಏಳು ದಶಕದಲ್ಲೇ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ..!!
ಬಿಜೆಪಿ (ಭಾರತೀಯ ಜನತಾ ಪಕ್ಷ) ಸದ್ಯ ಈ ಪಕ್ಷವು ಚುನಾವಣೆಯನ್ನು ಎಲ್ಲಾ ಪಕ್ಷದ ರೀತಿ ತೆಗೆದುಕೊಂಡಿಲ್ಲ ಏಕೆಂದರೆ ಕಳೆದ 6 ರಿಂದ 8 ವರ್ಷದಿಂದ ಬಹುತೇಕ ಎಲ್ಲಾ ಚುನಾವಣೆಗಳನ್ನು, ಎಲ್ಲಾ ಕಡೆಯಲ್ಲೂ ಎಲ್ಲರ ವಿರುದ್ಧವಾಗಿಯೂ ನಿಂತು ಅಭ್ಯರ್ಥಿಗಳು ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಸದೃಢ ಗೊಳಿಸುತ್ತಾ ಇದ್ದಾರೆ. ಇದಕ್ಕೆ ಉತ್ತಮ ನಿದರ್ಶನ ಎಂದರೆ ಕಳೆದ 71 ವರ್ಷದಿಂದ..!! ಅಧಿಕಾರದಿಂದ ದೂರವಿದ್ದ ಭಾರತೀಯ ಜನತಾ ಪಕ್ಷ ಈಗ ಅಧಿಕಾರ ಚುಕ್ಕಾಣಿ ಹಿಡಿದೆ. ಅದು ಎಲ್ಲಿ.? ಯಾರ ವಿರುದ್ಧ .?ಯಾವ ಮತಕ್ಷೇತ್ರ .? ಎನ್ನುವ ಎಲ್ಲಾ ಮಾಹಿತಿಗಳು ಇಲ್ಲಿವೆ ನೋಡಿ.
ಬೆಂಗಳೂರು ಉತ್ತರ ತಾಲೂಕಿನ ಬ್ಯಾಟರಾಯನಪುರ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ಇದೇ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಬಿದ್ದಿದೆ.
2020 ರಿಂದ 5 ವರ್ಷಗಳಿಗೆ ನಡೆದಿದ್ದ ಸಂಘದ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳಲ್ಲಿ ಬಿಜೆಪಿ 10 ಸ್ಥಾನಗಳಲ್ಲೂ ಭರ್ಜರಿ ಜಯ ಗಳಿಸಿದೆ.
ಬಿಜೆಪಿಯ ಹಿರಿಯ ಮುಖಂಡ ಚಕ್ರಪಾಣಿ ಅವರ ನೇತೃತ್ವದಲ್ಲಿ ಈ ಜಯ ಗಳಿಸಿದೆ.
1949 ರಲ್ಲಿ ಪ್ರಾರಂಭವಾದ ಈ ಸಂಘ 21ವರ್ಷಗಳಿಂದ ಕಾಂಗ್ರೆಸ್ ಹಾಗೂ ಇತರರು ಅಧಿಕಾರ ಚುಕ್ಕಾಣಿ ಯಲ್ಲಿ ಇದ್ದರು. ಒಮ್ಮೆಯು ಬಿಜೆಪಿ ಇಲ್ಲಿ ಅಧಿಕಾರ ಹಿಡಿದಿರಲಿಲ್ಲ ಈಗ ಬಿಜೆಪಿ ಪಕ್ಷ ಇಲ್ಲಿ ತನ್ನ ಅಧಿಕಾರ ಸ್ಥಾಪಿಸಿದೆ.
ಬಿಜೆಪಿಯಿಂದ ಯಾರು ಯಾರು ಗೆದ್ದಿದ್ದಾರೆ.?
ಎ. ಮೋಹನ್ ರಾಜ್,ಬಿ.ಎಸ್.ರಾಜಶೇಖರ್ (ಅವಿರೋಧ ಆಯ್ಕೆ), ಟಿ.ಎನ್ ಅಶೋಕ್ ಗೌಡ, ರಾಜೇಶ್, ಕೆ.ಎಸ್.ಸುಧಾಕರ್,ಟಿ.ಬಸವರಾಜು,ಎನ್. ಮುನೇಗೌಡ, ಎಸ್ .ಸೋಮಶೇಖರ್, ಜಿ.ಕೆ.ಕಾರ್ತಿಕ್, ಎಲ್. ನಂಜಪ್ಪ, ಸರೋಜಮ್ಮ, ರತ್ನಮ್ಮ.