ಕೋವಿಡ್ -19 : ಭಾರತದಲ್ಲಿ ನೂರರ ಗಡಿ ದಾಟಿದ ಸೊಂಕಿತರ ಸಂಖ್ಯೆ.
ನವದೆಹಲಿ : ದೇಶದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಈ ನಡುವೆ ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.
ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು , ಕೊರೊನಾ ಭಾದಿತರ ಸಂಖ್ಯೆ 110 ಕ್ಕೆ ತಲುಪಿದೆ. ಭಾನುವಾರ ಉತ್ತರಾಖಂಡದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ. ಕರ್ನಾಟಕದಲ್ಲಿ 7,
ಮಹರಾಷ್ಟ್ರದಲ್ಲಿ 32 , ತೆಲಂಗಾಣದಲ್ಲಿ 3, ಕೇರಳದಲ್ಲಿ 22 ಪ್ರಕರಣಗಳು ಪತ್ತೆಯಾಗಿವೆ.
ಸ್ತಬ್ಧವಾಗಿದೆ ಬೆಂಗಳೂರು.....
ಇನ್ನು ಬೆಂಗಳೂರಿನಲ್ಲಿ ಸಹ ಕೊರೊನಾ ಭೀತಿ ಹೆಚ್ಚಾಗಿದ್ದು ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆ ಪ್ರಯಾಣಿಕರಿಲ್ಲದೇ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುತ್ತೀವೆ. ಬಿಎಂಟಿಸಿ, ಮೆಟ್ರೋ ಗಳು ಪ್ರಯಾಣಿಕರಿಲ್ಲದೇ ಖಾಲಿ ಸಂಚರಿಸುತ್ತಿವೆ. ಇನ್ನು ಮಾಲ್ ಹಾಗೂ ಚಿತ್ರಮಂದಿರಗಳು ಸಹ ಮುಚ್ಚಿದ್ದು,
ಬೆಂಗಳೂರಿನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಇನ್ನು ರಾಜ್ಯದ ಕಲಬುರಗಿಯಲ್ಲಿ ಕೊರೊನಾಗೆ ಮೊದಲ ಬಲಿಯಾದ ನಂತರ ಎಚ್ಚೆತ್ತ ರಾಜ್ಯ ಸರ್ಕಾರ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಾರ್ಚ್ 28 ರ ವರೆಗೆ ರಜೆ ಘೋಷಿಸಿದೆ. ಇನ್ನು ಸೋಂಕು ಹರಡದಂತೆ ರಾಜ್ಯ ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದ್ದು ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸಭೆ ಸಮಾರಂಭಗಳಿಗೆ ನಿಷೇಧ ಹೇರಿದ್ದು, ಹೆಚ್ಚು ಜನರು ಒಂದೆಡೆ ಸೇರದಂತೆ ನೋಡಿಕೊಳ್ಳಲಾಗುತ್ತಿದೆ.