ಶಿವಲಿಂಗನಹಳ್ಳಿ ಗ್ರಾಮದಲ್ಲಿ 50 ವರ್ಷ ನೆನೆಗುದಿಯಲ್ಲಿದ್ದ ಮಠದ ಸ್ವಚ್ಛತಾ ಕಾರ್ಯ ಇಂದು ಆರಂಭ.

ಬಳ್ಳಾರಿ :ಹರ ಮುನಿದರೆ ಗುರು ಕಾಯುವನಯ್ಯ. ಗುರು ಮುನಿದರೆ ಇನ್ನಾರು ಕಾಯುವರಯ್ಯ ನಮ್ಮನ್ನು. ಎನ್ನುವ ಮಾತಿನಂತೆ  ಸರಿಯಾದ ನಿರ್ವಹಣೆ ಮಾಡದ ಕಾರಣ ಕಳೆದ 50 ವರ್ಷಗಳಿಂದ ಪ್ರಯೋಜನಕ್ಕೆ ಬಾರದಂತಾಗಿದ್ದ  ಮಠದ ಜಾಗದಲ್ಲಿ ಸ್ವಚ್ಛತಾ ಕಾರ್ಯವನ್ನು  ಯುವಕರ ಇಚ್ಚಾಶಕ್ತಿ, ಹಿರಿಯರ ಮಾರ್ಗದರ್ಶನದೊಂದಿಗೆ ಇಂದು   ಆರಂಭಿಸಲಾಯಿತು. ಊರಿನ ಹಿರಿಯರು ಮತ್ತು ಕಿರಿಯರ ಸಮಾಗಮದಲ್ಲಿ ದೈವ ಕಾರ್ಯಕ್ಕೆ ಚಾಲನೆ ಸಿಕ್ಕಿತು.

ಡಾ. ಶ್ರೀ ಮಳೆಯೋಗೇಶ್ವರ ಶಿವಾಚಾರ್ಯ ಸ್ವಾಮಿಗಳು ಮಠದ ಜಾಗದಲ್ಲಿ ಪೂಜೆ ಸಲ್ಲಿಸುವ ಮೂಲಕ ಸ್ವಚ್ಛತಾ  ಕಾರ್ಯಾಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಊರಿನ  ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.