ಸಾಮಾಜಿಕ ಜಾಲತಾಣ ಖಾತೆ ಜೊತೆ ಆಧಾರ್ ಸಂಖ್ಯೆ ಜೋಡಣೆ ಸುಳ್ಳು :ರವಿಶಂಕರ್ ಪ್ರಸಾದ್ ಸ್ಪಷ್ಟನೆ
ಸಾಮಾಜಿಕ ಜಾಲತಾಣ ಖಾತೆಗಳ ಜತೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಕುರಿತಂತೆ ಹರಡಿರುವ ಸುದ್ದಿಗಳ ಬಗ್ಗೆ ಬುಧವಾರದಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ .
ನಿನ್ನೆ ನಡೆದ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸಾಮಾಜಿಕ ಜಾಲತಾಣಕ್ಕೆ ಆಧಾರ್ ಜೋಡಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಸುಳ್ಳು ಸುದ್ದಿ ಹಬ್ಬಿಸಿರುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಮಾಜಿಕ ಜಾಲತಾಣಗಳಿಂದ ಹರಡುವ ಸುಳ್ಳು ಸುದ್ದಿಗಳ ಮೇಲೆ ನಿಯಂತ್ರಣ ಹೊಂದುವುದು ಅಗತ್ಯ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದರು .
ಜಾಮಿಯಾ ಶೂಟರ್ ವಿಡಿಯೋ ಫೇಸ್ ಬುಕ್ ನಲ್ಲಿ ಲೈವ್ ಪ್ರಸಾರವಾಗಿದ್ದನ್ನು ಕಾಂಗ್ರೆಸ್ ಮುಖಂಡ ಗೌರವ್ ಗೊಗಾಯಿಅವರು ಚರ್ಚೆಯಲ್ಲಿ ಉಲ್ಲೇಖಿಸಿ,
ಈ ಬಗ್ಗೆ ಸರ್ಕಾರ ಯಾವ ಕ್ರಮ ಜರುಗಿಸಿದೆ ಎಂದು ಸಹ ಪ್ರಶ್ನಿಸಿದರು.ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಹೆಚ್ಚು ಹೇಳಲು ಸಾಧ್ಯವಿಲ್ಲ ಎಂದು ರವಿಶಂಕರ್ ಹೇಳಿದರು.