ಏಪ್ರಿಲ್ ತಿಂಗಳ 1ರಿಂದ ಕೇಂದ್ರ ಸರ್ಕಾರದ ಮನೆ ಗಣತಿ ಕಾರ್ಯಕ್ರಮ....
ಏಪ್ರಿಲ್ 1ರಿಂದ ಕೇಂದ್ರ ಸರ್ಕಾರದ ಮನೆ ಗಣತೆ. ಸಿ.ಎ.ಎ ಮತ್ತು ಎನ್.ಆರ್ ಸಿಯ ಮಾಹಿತಿ ಕಲೆಹಾಕುವ ವಿಚಾರ.
ಪೌರತ್ವ ಮಸೂದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಗ್ಗೆ ದೇಶವ್ಯಾಪಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ದೇಶವ್ಯಾಪಿ ಮನೆ ಗಣತಿಗೆ ಗುರುವಾರ ಅಧಿಸೂಚನೆ ಹೊರಡಿಸಿದೆ.
ಏನೇನು ಮಾಹಿತಿ ಸಂಗ್ರಹ: ಮನೆ ಮಾಲಿಕನ ಮೊಬೈಲ್ ನಂಬರ್, ಮನೆಯಲ್ಲಿನ ಶೌಚಾಲಯ, ಸ್ನಾನ ಗೃಹ, ತ್ಯಾಜ್ಯ ನಿರ್ವಹಣೆ, ಟಿವಿ, ಮೊಬೈಲ್, ರೇಡಿಯೋ, ಲ್ಯಾಪ್‌ಟಾಪ್, ಕಂಪ್ಯೂಟರ್, ಸೈಕಲ್ , ವಾಹನಗಳ ನೋಂದಣಿ ಸಂಖ್ಯೆ, ಮನೆ ನಂಬರ್, ಮನೆಯಲ್ಲಿರುವ ಸದಸ್ಯರ ಸಂಖ್ಯೆ, ವಿವಾಹಿತರ ಸಂಖ್ಯೆ, ಜಾತಿ, ಕುಡಿಯುವ ನೀರಿನ ಮೂಲ, ಅಡುಗೆ ಮನೆ ನೆಲದ ವಿಧ, ಮನೆಯ ಸ್ಥಿತಿ, ವಿದ್ಯುತ್ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತದೆ.
ಈ ಕುರಿತು ಅಧಿಸೂಚನೆ ಹೊರಡಿಸಿರುವ ರಿಜಿಸ್ಟ್ರಾರ್ ಜನರಲ್ ಮತ್ತು ಗಣತಿ ಆಯುಕ್ತರು, ಗಣತಿ ಅಧಿಕಾರಿಗಳು ಏಪ್ರಿಲ್ 1ರಿಂದ ಸೆಪ್ಟೆಂಬರ್ ವರೆಗೆ ದೇಶವ್ಯಾಪಿ ಮನೆಗಣತಿ ಮಾಡಲಿದ್ದಾರೆ.
2021ರಲ್ಲಿ ನಡೆಸಲು ಉದ್ದೇಶಿರುವ ಜನಗಣತಿಗೆ ಪೂರ್ವವಾಗಿ ಸರ್ಕಾರ ಈ ಮನೆ ಗಣತಿ ನಡೆಸುತ್ತಿದೆ. ಇದರಲ್ಲಿ ಮನೆಯ ಯಜಮಾನರ ಮೊಬೈಲ್ ನಂಬರ್ ಸೇರಿ ವಿವಿಧ ರೀತಿಯ ಮಾಹಿತಿ ಸಂಗ್ರಹಿಸಲಾಗುತ್ತದೆ.