ಸರಣಿ ಗೆಲ್ಲುವ ತವಕದಲ್ಲಿ ಟೀಮ್ ಇಂಡಿಯಾ
ಪುಣೆ: ಭಾರತ ಹಾಗೂ ಶ್ರೀಲಂಕಾ ನಡುವಿನ ಅಂತಿಮ ಟಿ20 ಪಂದ್ಯ ಇಂದು ನಡೆಯಲಿದೆ.ಎರಡನೇ ಟಿ20 ಪಂದ್ಯ ಗೆದ್ದು ವಿಶ್ವಾಸದಲ್ಲಿರುವ ಭಾರತ ತಂಡ ಶುಕ್ರವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಹಣಾಹಣಿಯಲ್ಲಿ ವಿಜಯಮಾಲೆ ಹಾಕಿಸಿಕೊಳ್ಳುವ ತವಕದಲ್ಲಿ ಟೀಮ್ ಇಂಡಿಯಾ ಇದೆ.
ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿರುವ ಭಾರತಕ್ಕೆ ಈ ಪಂದ್ಯದಲ್ಲಿ ಜಯಿಸುವುದು ಕಷ್ಟವೇನಲ್ಲ, ಏಕೆಂದರೆ ಎಲ್ಲಾ ವಿಭಾಗದಲ್ಲಿ ಸ್ಟ್ರಾಂಗ್ ಇದೆ. ಇದ್ದ ವೇಗಿ ಲಸಿತ್ ಮಾಲಿಂಗ ನೇತೃತ್ವದ ಶ್ರೀಲಂಕಾ ಪಡೆ ಯಾವ ಸಮಯದಲ್ಲಿ ಸಿಡಿದೇಳುವ ಸಾಮರ್ಥ್ಯ ಹೊಂದಿದೆ.ಎಚ್ಚರ
ಎರಡನೇ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ಆಶಾದಾಯಕವಾಗಿತ್ತು. ಎದುರಾಳಿ ಯಾವುದೇ ಕ್ಷಣದಲ್ಲೂ ಚೇತರಿಸಿಕೊಳ್ಳದಂತೆ ನೋಡಿಕೊಂಡಿತಲ್ಲದೆ ಯಾವುದೇ ಗೊಂದಲವಿಲ್ಲದೆ ಅಧಿಕಾರಯುತವಾಗಿ ಬಗ್ಗು ಬಡಿಯಿತು. ಕೊಹ್ಲಿ ಬಳಗದ ಪ್ರತಿಯೊಬ್ಬ ಆಟಗಾರನಿಗೂ ಜಯದ ಶ್ರೇಯಸ್ಸು ದೊರೆಯುತ್ತದೆ.
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಸಂಜು ಸ್ಯಾಮ್ಸನ್, ರಿಷಭ್ ಪಂತ್ (ವಿಕೆಟ್‌ಕೀಪರ್), ಶಿವಂ ದುಬೆ,ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಯಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಶಾರ್ದುಲ್ ಠಾಕೂರ್, ನವದೀಪ್ ಸೈನಿ
ಶ್ರೀಲಂಕಾ: ಲಸಿತ್ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕ, ಕುಸಾಲ್ ಪೆರೆರಾ, ನಿರೋಶನ್ ಡಿಕ್ವೆಲ್ಲ, ಧನಂಜಯ ಡಿ’ಸಿಲ್ವಾ, ಇಸುರು ಉದಾನ, ಭಾನುಕ ರಾಜಪಕ್ಸ, ಒಶಾಡ ಫರ್ನಾಂಡೊ, ವಾನಿಂಡು ಹಸರಂಗ, ಲಹಿರು ಕುಮಾರ, ಕುಸಾಲ್ ಮೆಂಡಿಸ್, ಲಕ್ಷಣ್ ಸಂದಕನ್ ಮತ್ತು ಕಸುನ್ ರಜಿತ.