ಫೋರಂ ಮಾಲ್ ನ ಫ್ಲೀ ಮಾರ್ಕೆಟ್ ನಲ್ಲಿ ಕ್ರಿಸ್ ಮಸ್ ಸಡಗರ....

ಡಿಸೆಂಬರ ತಿಂಗಳಲ್ಲಿ  ಅಂಗಡಿ ಮತ್ತು ಶಾಪಿಂಗ್ ಮಾಲ್ ಗಳನ್ನು ವರ್ಣಮಯವಾಗಿ ಅಲಂಕರಿಸಿರುತ್ತಾರೆ. ಈ ಮಾಲ್ ಗಳಿಗೆ ಭೇಟಿ ನೀಡಿ ವಿಂಡೋ ಶಾಪಿಂಗ್ ಮಾಡುವುದೇ ಒಂದು ಚೆಂದ. ಇದಕ್ಕೆ ಕಾರಣ ಏನಪ್ಪಾ ಅಂತೀರಾ?  ಇದೇ ತಿಂಗಳು ಬರುವ  ಕ್ರಿಸ್ ಮಸ್...!

 ಕ್ರಿಸ್ ಮಸ್  ಹಬ್ಬ ಬರುತ್ತಿದ್ದಂತೆಯೇ ಎಲ್ಲಾ ಶಾಪಿಂಗ್ ಮಾಲ್ ಗಳಲ್ಲಿ ಕಲರ್ಫುಲ್ ಮತ್ತು ವೈಬ್ರೆಂಟ್ ಆಗಿರುವ ಅಲಂಕಾರಿಕ ವಸ್ತುಗಳ ಸ್ಟಾಲ್ ಗಳನ್ನು ಹಮ್ಮಿಕೊಂಡಿರುತ್ತಾರೆ.

"ಫ್ಲೀ080 ಮಾರ್ಕೆಟ್" ಎಂಬುದು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಆಯೋಜಿಸಿರುವ ಇಂಥದ್ದೇ ಒಂದು ಇವೆಂಟ್ ಆಗಿದೆ. ಕೋರಮಂಗಲದ ಫೋರಂ ಮಾಲ್ ನ ಆವರಣದಲ್ಲಿ, ಡಿಸೆಂಬರ್ 13ರಿಂದ 22ವರೆಗು ನಡೆಯುತ್ತಿರುವ ಫ್ಲೀ ಮಾರ್ಕೆಟ್ ನ ಅಬ್ಬರ ಜೋರಾಗಿದೆ. ಇದರ ವಿಶೇಷತೆ ಎಂದರೆ ಅಲ್ಪ ಬೆಲೆಯಲ್ಲೇ ಒಳ್ಳೆಯ ಗುಣಮಟ್ಟದ ವಸ್ತುಗಳು ಇಲ್ಲಿ ಲಭ್ಯವಿವೆ.

ಇಲ್ಲಿ ಎಲ್ಲಾ ತರಹದ ಸ್ಟಾಲ್ ಗಳನ್ನು ನಾವು ಕಾಣಬಹುದು. ಹೆಣ್ಣುಮಕ್ಕಳು ಬಳಸುವ ವಿಧವಿಧದ ಆಭರಣಗಳಿಂದ ಹಿಡಿದು ಶಾಲ್ಗಳು, ಶೂಗಳು,  ಹ್ಯಾಂಡ್ ಬ್ಯಾಗ್ಸ್ ಗಳು, ಹ್ಯಾಂಡ್ಮೇಡ್ ಅಲಂಕಾರಿಕ ಲ್ಯಾಂಪ್ಗಳು ಮತ್ತು ಮುಖ್ಯವಾಗಿ ಕ್ರಿಸ್ ಮಸ್ ಹಬ್ಬಕ್ಕೆ ಬೇಕಾದ ಎಲ್ಲಾ ಅಲಂಕಾರಿಕ ವಸ್ತುಗಳು ಒಂದೇ  ಪ್ಲಾಟ್ ಫಾರಂನಲ್ಲಿ ದೊರೆಯುತ್ತಿದೆ.

ನೀವು ಸಹ ಫ್ಲೀ ಮಾರ್ಕೆಟ್ ಗೆ ದೌಡಾಯಿಸಿ ಹಾಗೂ ಈ ಕ್ರಿಸ್ ಮಸ್ ಅನ್ನು ಸಡಗರದಿಂದ ಆಚರಿಸಿ.