ಈ ಬಾರಿಯಾದರೂ ಅರ್ ಸಿಬಿ ಕಪ್ ಗೆಲ್ಲುತ್ತಾ..?
ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನು ಕೆಲವು ದಿನಗಳ ಬಾಕಿರುವ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಅಭ್ಯಾಸದಲ್ಲಿ ನಿರತರಾಗಿದ್ದು,ಈ ಟೂರ್ನಿಯಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೂಡು ಭರ್ಜರಿ ತಯಾರಿ ನಡೆಸಿದ್ದಾರೆ. ಆರ್ ಸಿಬಿ ತಂಡದ ಹಣೆಬರಹ ಇಲ್ಲಿಯವರೆಗೂ ಯಾಕೋ ಸರಿ ಇಲ್ಲ ಎಂದೇ ಹೇಳಬಹುದು. ಎಲ್ಲ ಆವೃತ್ತಿಗಳಲ್ಲಿ ವಿಶ್ವದ ಅತ್ಯಂತ ಶ್ರೇಷ್ಠ ಆಟಗಾರರನ್ನು ಹೊಂದಿದ್ದರೂ ಆರ್‌ಸಿಬಿ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಒಟ್ಟು 12 ಆವೃತ್ತಿಗಳಲ್ಲಿ ಆಡಿರುವ ಆರ್‌ಸಿಬಿ, ಒಟ್ಟು ಮೂರು ಬಾರಿ ಅಂದರೆ 2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶ ಮಾಡಿದ್ದರೂ ರನ್ನರ್‌ಅಪ್‌ಗೆ ತೃಪ್ತಿಪಟ್ಟಿತ್ತು. 2010 ಮತ್ತು 2015ರ ಆವೃತ್ತಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನ ಪಡೆದಿತ್ತು. ಆದರೆ, ಈ ಬಾರಿ ನೂತನ ಲೋಗೋ ಹಾಗೂ ಹೊಸ ಜೋಶ್‌ನೊಂದಿಗೆ 13ನೇ ಆವೃತ್ತಿಯಲ್ಲಿ ಆಡಲು ರಾಯಲ್ ಚಾಲೆಂಜರ್ಸ್ ತಂಡ ಸಜ್ಜಾಗುತ್ತಿದೆ.ಒಂದೆಡೆ ಪ್ರತಿ ಆವೃತ್ತಿಯಲ್ಲೂ ಪ್ರಶಸ್ತಿ ಗೆಲ್ಲುವಲ್ಲಿ ಆರ್‌ಸಿಬಿ ವಿಫಲವಾಗುತ್ತಿದ್ದರೂ ಮತ್ತೊಂದೆಡೆ ತವರು ಅಭಿಮಾನಿಗಳು ಮಾತ್ರ ತಂಡದ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಒಂದಲ್ಲ ಒಂದು ಆವೃತ್ತಿಯಲ್ಲಿ ನಮ್ಮ ಆರ್‌ಸಿಬಿ ಚಾಂಪಿಯನ್ ಆಗುತ್ತದೆ ಎಂಬ ವಿಶ್ವಾಸದೊಂದಿಗೆ ಕಾದು ಕುಳಿತಿದ್ದಾರೆ. 'ಈ ಸಲ ಕಪ್ ನಮ್ದೇ' ಎಂಬ ವಾಕ್ಯದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಆದರೆ, ಈ ಬಾರಿಯಾದರೂ ಕೊಹ್ಲಿ ಹುಡುಗರು ಪ್ರಶಸ್ತಿ ಕೊರಗನ್ನು ನೀಗಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.