ಕರ್ತವ್ಯ ನಿರತ ಎಸ್‌ಐ ಹತ್ಯೆ

ಚೆನ್ನೈ: ತಮಿಳುನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರನ್ನು ಇಬ್ಬರು ಬಂದೂಕುಧಾರಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

 

ಎಸ್‌ಐ ವಿಲ್ಸನ್ (58) ತಮಿಳುನಾಡು-ಕೇರಳ ಗಡಿ ಬಳಿಯ ಕನ್ಯಾಕುಮಾರಿ ಜಿಲ್ಲೆಯ ಕಲಿಯಕ್ಕಾವಲೈ ಬಳಿಯ ಪದಂಡಲುಮುಡು ಚೆಕ್‌ಪಾಯಿಂಟ್‌ನಲ್ಲಿ ಕರ್ತವ್ಯದಲ್ಲಿದ್ದರು. ಇದ್ದಕ್ಕಿದ್ದಂತೆ ರಾತ್ರಿ 9.25 ರ ಸುಮಾರಿಗೆ ಇಬ್ಬರು ಬಂದೂಕುಧಾರಿಗಳು ಚೆಕ್‌ಪಾಯಿಂಟ್‌ಗೆ ಪ್ರವೇಶಿಸಿ ಎಸ್‌ಐ ಗೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದ್ದಾರೆ. ಮೂರು ಗುಂಡುಗಳು ಅವರ ದೇಹಕ್ಕೆ ನುಗ್ಗಿದವು. ರಕ್ದ ಮಡುವಿನಲ್ಲಿ ಬಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟರು.

 

ಬೆಂಗಳೂರು ಮೂಲದ ಮೊಹಮ್ಮದ್ ಹನೀಫ್ ಖಾನ್, ಇಮ್ರಾನ್ ಖಾನ್ ಮತ್ತು ಮಹಮೂದ್ ಸೈಯದ್ ಎಂಬ ಮೂವರನ್ನು ಬುಧವಾರ ಕ್ಯೂ ಬ್ರಾಂಚ್ ಪೊಲೀಸರು ಬಂಧಿಸಿ ಅವರ ಬಳಿಯಿದ್ದ ಮೂರು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ