ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಸ್ಥಾಪನೆ : ಪ್ರಧಾನಿ ಮೋದಿ ಘೋಷಣೆ....
ನವದೆಹಲಿ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್ ನಿರ್ಮಿಸಲಾಗುವುದು ಎಂದು ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಆದೇಶದಂತೆ ಸಂಪುಟದಲ್ಲಿ ಚರ್ಚಿಸಿ ಟ್ರಸ್ಟ್ ಕುರಿತು ರೂಪುರೆಷೆಗಳನ್ನು ಸಿಧ್ಧಪಡಿಸಲಾಗುವುದು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸಂಪೂರ್ಣ ರಾಮಜನ್ಮ ಭೂಮಿ ರಾಮಲಲ್ಲಾ ವಶಕ್ಕೆ ಬಂದಿದ್ದು, ಮಂದಿರ ನಿರ್ಮಾಣದ ಪೂರ್ಣ ಜವಬ್ದಾರಿಯನ್ನು ಟ್ರಸ್ಟ್ ಹೊರಲಿದೆ. ಇನ್ನು ಸುನ್ನಿ ವಕ್ಫ್ ಬೋರ್ಡ್ ಗೆ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗ ನೀಡಲು ಕೋರ್ಟ್ ಆದೇಶಿಸಿದ್ದು, ಸರ್ಕಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೂ ಜಾಗವನ್ನು ನೀಡಲಿದೆ ಎಂದು ಹೇಳಿದರು.
ಇನ್ನು ರಾಮಮಂದಿರ ನಿರ್ಮಾಣವನ್ನು ಎಲ್ಲರೂ ಗೌರವಿಸಬೇಕು ಹಾಗೂ ಬೆಂಬಲಿಸಬೇಕು ಎಂದು ಪ್ರಧಾನಿ ಮೋದಿ ಸಂಸತ್ ನಲ್ಲಿ ಎಲ್ಲರನ್ನೂ ವಿನಂತಿಸಿಕೊಂಡರು.