ಏಪ್ರಿಲ್ 20 ರ ನಂತರ ಲಾಕ್ ಡೌನ್ ಸಡಿಲಿಕೆ : ಕೇಂದ್ರದ ಮಾರ್ಗಸೂಚಿ ಪ್ರಕಟ : ಕೃಷಿ , ಕೈಗಾರಿಕೆಗಳ ಚಟುವಟಿಕೆಗೆ ಅನುಮತಿ.
ನವದೆಹಲಿ : ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್ ಡೌನ್ ಅವಧಿಯನ್ನು ಮೇ 3 ರ ವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಲಾಕ್ ಡೌನ್ ನಿಂದ ಬೇಜಾರಾಗಿದ್ದ ಜನಗಳಿಗೆ ಲಾಕ್ ಡೌನ್ ವಿಸ್ತರಣೆ ಮತ್ತಷ್ಟು ನಿರಾಸೆಯುಂಟುಮಾಡಿತ್ತು . ಆದರೆ ಇಂದು ಕೇಂದ್ರ ಸರ್ಕಾರ ಪ್ರಕಟಿಸಿರುವ ಎರಡನೇ ಹಂತದ ಲಾಕ್ ಡೌನ್ ಕುರಿತ ಮಾರ್ಗಸೂಚಿ ಜನರನ್ನು ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದೆ.
ಮಾರ್ಗಸೂಚಿಯಲ್ಲಿರುವ ಪ್ರಮುಖ ಅಂಶಗಳು.....
* ಏಪ್ರಿಲ್ 20 ರ ವರೆಗೂ ಎಲ್ಲಾ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿರಬೇಕು.
* ಏಪ್ರಿಲ್ 20 ರ ನಂತರ ಕೃಷಿ ಚಟುವಟಿಕೆ, ಕೃಷಿ ಊತ್ಪನ್ನಗಳ ಸಾಗಣೆ , ಮಾರಾಟಕ್ಕೆ ಅನುಮತಿ.
* ಕೈಗಾರಿಕೆಗಳ ಆರಂಭಕ್ಕೆ ಅನುಮತಿ ಅದರೆ ಶೇ. 50 ರಷ್ಟು ನೌಕರರು ಮಾತ್ರ ಬಳಕೆಗೆ ಷರತ್ತು.
* ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಸಂಸ್ಕರಣಾ ಘಟಕಗಳ ಕಾರ್ಯಾಚರಣೆಗೆ ಅವಕಾಶ..
* ನರೇಗಾ ಯೋಜನೆ ಅಡಿಯಲ್ಲಿ ನೀರಾವರಿ ಯೋಜನೆಗಳ ಕೆಲಸಕ್ಕೆ ಅವಕಾಶ..
* ಕೃಷಿ ಉತ್ಪನ್ನಗಳ ಖರೀದಿಗೆ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಹಲವು ಮಂಡಿಗಳ ಆರಂಭಕ್ಕೆ ಅವಕಾಶ...
* ಇ - ಕಾಮರ್ಸ್ ವಹಿವಾಟು ಆರಂಭ..
* ಐಟಿ ಹಾರ್ಡ್ವೇರ್ ಹಾಗೂ ಅಗತ್ಯ ವಸ್ತುಗಳ ತಯಾರಿಕೆಗೆ ಅವಕಾಶ..
* ಅಂತಾರಾಜ್ಯ ಸಾರಿಗೆ ಆರಂಭಕ್ಕೆ ಅವಕಾಶ..
ಹೀಗೆ ದೇಶದ ಆರ್ಥಿಕತೆಯ ಪುನಶ್ಚೇತನದ ಉದ್ದೇಶದಿಂದ ಹಲವು ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ
ಏಪ್ರಿಲ್ 20 ರ ಬಳಿಕ ಲಾಕ್ ಡೌನ್ ನಿಂದ ವಿನಾಯತಿ ನೀಡಲಿದೆ. ಲಾಕ್ ಡೌನ್ ಸಡಿಲಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ವಿವೇಚನಾಧಿಕಾರ ನೀಡಿದ್ದು ತಮ್ಮ ರಾಜ್ಯದ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಬಹುದಾಗಿದೆ.