ಮೇ 3 ವರೆಗು ಭಾರತ ಲಾಕ್ಡೌನ್ : ಸಪ್ತಪದಿ ಎಲ್ಲರೂ ತುಳಿಯಲೇಬೇಕು.
ಮೇ 3ರವರೆಗು ಭಾರತ ಸಂಪೂರ್ಣ ಲಾಕ್ಡೌನ್.
ಸಪ್ತಪದಿ ತುಳಿದರೆ ಮಾತ್ರ ಕೂರೋನಾ ವಿರುದ್ಧ ನಾವು ವಿಜಯಶಾಲಿ....!!!!
ದೇಶವನ್ನುದ್ದೇಶಿಸಿ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ,ಏಪ್ರಿಲ್ 14 ರಂದು ಮಾತನಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿಯವರು.
ದೇಶದಲ್ಲಿ ಕೂರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಭಾರತದ ಎಲ್ಲಾ ಪ್ರಜೆಗಳಿಗೂ ಧನ್ಯವಾದ ಸಲ್ಲಿಸುತ್ತಾ. 21ದಿನಗಳ ಲಾಕ್ಡೌನ್ ನಿಂದ ಸಾಮಾನ್ಯ ಜನರಿಗೆ ತೀವ್ರ ತೊಂದರೆ ಉಂಟಾಗಿದೆ. ದೇಶದ ಹಿತಕ್ಕೋಸ್ಕರ ನಮ್ಮೊಂದಿಗೆ ಸ್ಪಂದಿಸಿದ ಎಲ್ಲರಿಗೂ ಚಿರಋಣಿ.
ಎಂದು ಹೇಳುತ್ತಲೇ ನರೇಂದ್ರ ಮೋದಿಯವರು ದೇಶ ಇನ್ನೂ ಮೇ 3ರವರೆಗೂ ಸಂಪೂರ್ಣ ಲಾಕ್ಡೌನ್ ಇರಲಿದೆ.
ಈ ಬಾರಿಯ ಲಾಕ್ಡೌನ್ ಹೇಗಿರಲಿದೆ.??
ಈ ಬಾರಿಯ ಲಾಕ್ಡೌನ್ ಯಾವುದೇ ರೀತಿಯ ವಿನಾಯಿತಿ ನೀಡಲಾಗುವುದಿಲ್ಲ ಮೊದಲಿನ ನಿಯಮ ಗಿಂತಲೂ ಈ ಬಾರಿ ನಿಯಮ ಕಠಿಣವಾಗಿರಲಿದೆ.
ಜನರು ಮೊದಲಿಗಿಂತಲೂ ಹೆಚ್ಚಿನ ರೀತಿಯಲ್ಲಿ ಸಹಕರಿಸಿ ದೇಶವನ್ನು ಹಾಗೂ ನಿಮ್ಮ ಆರೋಗ್ಯದ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳಿ.
ಬೇಜವಾಬ್ದಾರಿಯ ವರ್ತನೆ ತೋರಬೇಡಿ ನಿಮ್ಮ ಈ ವರ್ತನೆಯಿಂದ ಬೇರೆಯವರಿಗೂ ತೊಡಕಾಗಿತ್ತು. ಎಲ್ಲರ ಗಮನದಲ್ಲಿರಲಿ ಲಕ್ಷ್ಮಣ ರೇಖೆ ದಾಟ ಬೇಡಿ ಕೊರೋನ ಹರಡದಂತೆ ತಡೆಯಿರಿ. ಎಲ್ಲರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಗುಂಪು ಕೂಡುವುದನ್ನು ತಡೆಯಿರಿ.
ಕೂರೋನಾ ಸೈನಿಕರಿಗೆ ಸಹಕರಿಸಿ ರೋಗವನ್ನು ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಯಿರಿ.
ಯಾವ ಯಾವ ಕ್ಷೇತ್ರಗಳಿಗೆ ಸಡಿಲಿಕೆ ನೀಡಿದ್ದಾರೆ.?
ಏಪ್ರಿಲ್ 20ರಿಂದ ಕೆಲವು ಕ್ಷೇತ್ರಗಳಿಗೆ ಲಾಕ್ಡೌನ್ ನಿಯಮದಿಂದ ಸ್ವಲ್ಪ ಮಟ್ಟದ ವಿನಾಯಿತಿ ಸಿಗಲಿದೆ. ಕೃಷಿಕರಿಗೆ ಹಾಗೂ ದಿನಗೂಲಿ ನೌಕರರಿಗೆ ಸ್ವಲ್ಪಮಟ್ಟಿನ ರಿಯಾಯಿತಿ ನೀಡುವುದಾಗಿ ಸೂಚನೆ ವ್ಯಕ್ತ ಪಡಿಸಿದ್ದಾರೆ.
'ದೇಶವನ್ನು ಕಟ್ಟುತ್ತಿರುವ ನನ್ನ ನೆಚ್ಚಿನ ದಿನಗೂಲಿ ನೌಕರರಿಗೆ ''ಪ್ರಧಾನಮಂತ್ರಿ ಗರೀಬ್ ಕಲ್ಯಾಣ" ಯೋಜನೆಯಡಿ ಸರ್ಕಾರ ಅವರಿಗೆ ಸಹಾಯ ನೀಡಲಿದೆ'.
ಭಾರತದ ಬಳಿ ಔಷಧಿಯಿಂದ ಹಿಡಿದು ಆಹಾರ ಪದಾರ್ಥದ ವರೆಗೂ, ಬಹಳಷ್ಟು ಪದಾರ್ಥಗಳು ನಮ್ಮ ಗೋದಾಮಿನಲ್ಲಿ ಇದೆ .ಯಾರು ಆತಂಕಪಡಬೇಕಾದ ಅಗತ್ಯವಿಲ್ಲ ಎಲ್ಲರಿಗೂ ತಲುಪಿಸುವ ಕಾರ್ಯ ಮಾಡಲಿದ್ದೇವೆ ಎಂದು ಆಶ್ವಾಸನೆ ನೀಡಿದರು.
ಇದೇ ವೇಳೆ ಭಾಷಣದ ಅಂತ್ಯದಲ್ಲಿ ಸಪ್ತಪದಿ ಸೂತ್ರ ತಿಳಿಸಿದರು.
1ನೇ ಸೂತ್ರ :- ಮನೆಯಲ್ಲಿನ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
2ನೇ ಸೂತ್ರ :- ಲಾಕ್ಡೌನ್ ಲಕ್ಷ್ಮಣರೇಖೆ ದಾಟ ಬೇಡಿ, ಮನೆಯಲ್ಲಿ ಸಿದ್ಧಪಡಿಸಿದ ಮಾಸ್ಕನ್ನು ಧರಿಸಿ ಸುರಕ್ಷಿತವಾಗಿರಿ.
3ನೇ ಸೂತ್ರ :- ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಪಡಿಸಿ ಬಿಸಿನೀರು ಹಾಗೂ ಆರೋಗ್ಯ ಪದ್ಧತಿಯನ್ನು ಕಾಪಾಡಿಕೊಳ್ಳಿ.
4ನೇ ಸೂತ್ರ :- ಆರೋಗ್ಯ ಸೇತು ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ಅದರ ಉಪಯೋಗವನ್ನು ಎಲ್ಲರಿಗೂ ತಿಳಿಸಿ.
5ನೇ ಸೂತ್ರ :- ಆದಷ್ಟು ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಕೈಯಲ್ ಆದಷ್ಟು ಸಹಾಯ ಮಾಡಿ.
6ನೇ ಸೂತ್ರ:- ಮುಖ್ಯವಾಗಿ ವ್ಯವಸಾಯ ಹಾಗೂ ನೌಕರರಿಗೆ ಯಾವುದೇ ಕಂಪನಿ ಅಥವಾ ಯಾರೇ ಕೆಲಸದಿಂದ ತೆಗೆದು ಹಾಕದಿರಿ.
7ನೇ ಸೂತ್ರ :- ಪ್ರಮುಖ ಹಾಗೂ ನಿರ್ಣಾಯಕ ಕಡೆಯ ಸೂತ್ರ, ದೇಶದ ಕೊರೋನಾ ಸನ್ಮಾನ ನೀಡಿ ಹಾಗೂ ಅವರ ಸೇವೆಗೆ ಪ್ರೋತ್ಸಾಹಿಸಿ
7 ಸಪ್ತಪದಿ ಸೂತ್ರಗಳು ಅನುಸರಿಸಿದರೆ ನಾವು ಕೂರೋನಾ ವಿರುದ್ಧದ ಸಂಗ್ರಾಮದಲ್ಲಿ ವಿಜಯಶಾಲಿ ಗಳಾಗಲಿ ದ್ದೇವೆ ಎಂದು ಮಾತನ್ನು ಮುಕ್ತಾಯಗೊಳಿಸಿದರು.