ರೈತಪರ ಹೋರಾಟಕ್ಕೆ ಚಾಲನೆ.. ಭಾರತ್‌ ಬಂದ್‌ ಗೆ ಬೆಂಬಲ

ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಗಳೂರಿನ ಪುರಭವನದ ಮುಂದೆ ರೈತ ತಾನು ಬೆಳದ ತರಕಾರಿ ಹಣ್ಣುಗಳನ್ನು ಎತ್ತಿನ ಗಾಡಿಯಲ್ಲಿ ತೆಗೆದುಕೊಂಡು ಬಂದು,, ಪ್ರತಿಭಟಿಸುತ್ತಾ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋಧಿಯ ವಿರುದ್ಧ ಘೋಷಣೆ ಕೂಗುತ್ತಾ ಕೂಡಲೇ ಹೊಸ ಕಾಯ್ದೆ ಹಿಂಪಡೆಯಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ದೆಹಲಿ ಗಡಿಯಲ್ಲಿ ರೈತರು 13 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುವ ಹಾಗೆ ಕರ್ನಾಟಕದಲ್ಲಿ ನ್ಯಾಯ ಸಿಗುವ ಹೊರೆಗೂ ಉಗ್ರ ಹೋರಾಟ ಮಾಡುತ್ತೇವೆ ಎಂದು ರೈತಪರ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು

ಕೃಷಿ ಭೂಮಿ ಖರೀದಿಗಿದ್ದ ನಿರ್ಬಂಧಗಳನ್ನು ತೆಗೆದು ಹಾಕಿರುವುದು ಸೇರಿದಂತೆ, ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ 3 ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಇಂದು ಭಾರತ್ ಬಂದ್ ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜ್ಯಧಾನಿ ಬೆಂಗಳೂರಿನ ಟೌನ್ ಹಾಲ್ ಮುಂದೆ ಹಲವಾರು ರೈತ ಸಂಘಟನೆಗಳು ಪ್ರತಿಭಟನೆಗಿಳಿದವು.

ಕಾನೂನಂತೆ ಕಾನೂನು ಅವರಪ್ಪಂದೆ ಕಾನೂನು....ಸರ್ಕಾರವಂತೆ   ಸರ್ಕಾರ ಅವರಪ್ಪಂದೆ   ಸರ್ಕಾರ......!!!!!!ಎಂದು ಕೂಗುತ್ತಾ ರಾಜ್ಯ ರಾಜಧಾನಿ ಯಾದ ಬೆಂಗಳೂರಿನ ಟಾನ್ ಹಾಲ್ ಬಳಿ ಹಲವಾರು ರೈತಪರ ಸಂಘಗಳು ,ವಿದ್ಯಾರ್ಥಿ ಸಂಘಗಳು, ಮಹಿಳಾ ಸಂಘಗಳು  ಸೇರಿದಂತೆ ಇನ್ನು ಹಲವಾರು ಸಂಘಗಳು ದೇಶದಾದ್ಯಂತ ಇಂದು ಭಾರತ್ ಬಂದ್ ಗೆ ಕರೆ ಕೊಟ್ಟು ಎತ್ತಿನ ಗಾಡಿಯ ಮೂಲಕ   ಪ್ರತಿಭಟನೆಗೆ ಇಳಿದರು...ಕೃಷಿ ಗೆ ಸಂಬಂಧಿಸಿದ 3 ಕಾಯಿದೆಗಳನ್ನು ಸರ್ಕಾರ ಜಾರಿಗೊಳಿಸಿದ ಹಿನ್ನಲೆಯಲ್ಲಿ ಅವುಗಳನ್ನ ಹಿಂಪಡೆಯಲು ರೈತಪರ ಸಂಘಗಳು ಪ್ರತಿಭಟನೆಗೆ ಚಾಲನೆ ಕೊಟ್ಟರು