ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳನ್ನು ಶೇರ್ ಮಾಡುವ ಮುನ್ನ ತುಸು ಎಚ್ಚರ..!
ಸೋಷಿಯಲ್ ನೆಟ್ ವರ್ಕ್ ಗಳಲ್ಲಿ ಇ-ಪೇಪರ್ ನ್ನು ಶೇರ್ ಮಾಡುವುದರಿಂದ ನಿಮಗೆ ಕಾನೂನಿನ ತೊಡಕುಗಳಿವೆ.ಆದ್ದರಿಂದ ಸುದ್ದಿ ಹಂಚುವ ಮೊದಲು ಹಕ್ಕು ಸ್ವಾಮ್ಯ ಕಾಯ್ದೆಯ ಬಗ್ಗೆ ಅರಿವಿರಲಿ.ಸೋಷಿಯಲ್ ನೆಟ್ ವರ್ಕ್ ಗಳಲ್ಲಿ ಇ-ಪೇಪರ್ ನ್ನು ಶೇರ್ ಮಾಡುವುದರಿಂದ ನಿಮಗೆ ಕಾನೂನಿನ ತೊಡಕುಗಳಿವೆ.ಆದ್ದರಿಂದ ಸುದ್ದಿ ಹಂಚುವ ಮೊದಲು ಹಕ್ಕು ಸ್ವಾಮ್ಯ ಕಾಯ್ದೆಯ ಬಗ್ಗೆ ಅರಿವಿರಲಿ.
ನಾವು ಇಂದು ಶರವೇಗದಲ್ಲಿ ಸಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿದ್ದೇವೆ. ನಾವು ಯಾವುದೇ ಸೇವೆ ಪಡೆಯಬೇಕೆಂದರೆ ಕ್ಷಣಾರ್ಧದಲ್ಲಿ ಕೈ ಸೇರಲಿವೆ, ಉದಾಹರಣೆಗೆ ಬೆಳಿಗ್ಗೆ ತಿನ್ನುವ ತಿಂಡಿಯಿಂದ ಹಿಡಿದು ರಾತ್ರಿ ಕುಡಿಯುವ ಜ್ಯೂಸ್ ವರೆಗೂ ಆನ್ಲೈನ್ ಸೇವೆ ಆರಂಭವಾಗಿದೆ. ಈ ಆನ್ಲೈನ್ ಸೇವೆ ಇದೀಗ ಸುದ್ದಿ ಮಾಧ್ಯಮಲೋಕಕ್ಕೂ ಕಾಲಿಟ್ಟಿದ್ದು ಇ-ಪೇಪರ್ ಎಂಬ ಆನ್ಲೈನ್ ಸುದ್ದಿಪತ್ರಿಕೆಗಳು ಆರಂಭವಾಗಿದೆ. ಆದರೆ ಈ ಒಂದು ಸಂಸ್ಥೆಯ ಇ- ಪೇಪರ್ ಅನ್ನು ಅದರಲ್ಲಿ ಬರುವ ಸುದ್ದಿಯನ್ನು ಇಚ್ಚೆಬಂದಂತೆ ವಾಟ್ಸಪ್, ಫೇಸ್ಬುಕ್, ಟೆಲಿಗ್ರಾಂ ಇತ್ಯಾದಿ ಜಾಲತಾಣಗಳ ಮೂಲಕ ಹಂಚಿಕೆ ಮಾಡಲಾಗುತ್ತಿದೆ . ಈ ರೀತಿಯಾಗಿ ಒಂದು ಸಂಸ್ಥೆಯು ಪ್ರಕಟಿಸಿದ ಸುದ್ದಿ,ಲೇಖನ,ಪ್ರಕಟಣೆಗಳನ್ನು ಹಂಚಿಕೆ ಮಾಡುವುದು ಕಾನೂನುಬಾಹಿರ ಚಟುವಟಿಕೆಯಾಗಿದೆ. ಹಾಗಂತ ನೀವು ಸುದ್ದಿಯನ್ನು ಹಂಚಿಕೆ ಮಾಡಿಕೊಳ್ಳಬಾರದು ಅಂತೇನಿಲ್ಲ. ಕೇವಲ ಅಧಿಕೃತವಾದ ಸಂಸ್ಥೆಯಲ್ಲಿ ಬರುವ ಸುದ್ದಯನ್ನು ಹಂಚಿಕೊಳ್ಳ ಬಹುದಾಗಿದೆ.
ಆಯಾ ಮಾಧ್ಯಮ ಸಂಸ್ಥೆಯು ಹೊರತಾಗಿ ಸಾಮಾಜಿಕ ಜಾಲತಾಣವಾದ ವಾಟ್ಸಪ್,ಫೇಸ್ಬುಕ್,ಟೆಲಿಗ್ರಾಂ ಇತ್ಯಾದಿ ತಾಣಗಳಿಗೆ ಹಕ್ಕು ಸ್ವಾಮ್ಯದ ಷರತ್ತುಗಳನ್ನು ವಿಧಿಸಲಾಗಿರುತ್ತದೆ.ನೀವೇನಾದರೂ ಇ-ಪೇಪರ್ ಸುದ್ದಿ ಪತ್ರಿಕೆಗಳನ್ನು ಪಿ.ಡಿ.ಎಫ್ ಮೂಲಕ ಹಂಚಿಕೊಂಡರೆ ನಿಮ್ಮ ವಿರುದ್ದ ಆ ಸಂಸ್ಥೆಯು ಕಾನೂನುಕ್ರಮ ಜರುಗಿಸಬಹುದಾಗಿದೆ. ಏಕೆಂದರೆ ಕೃತಿಸ್ವಾಮ್ಯ ಕಾಯ್ದೆ ಸೆಕ್ಷನ್ 17(ಎ)ರ ನಿಬಂಧನೆಗಳ ಪ್ರಕಾರ ಪತ್ರಿಕೆ ಅಥವಾ ವೆಬ್ಸೈಟ್ ನಲ್ಲಿ ಪ್ರಕಟವಾದ ಸುದ್ದಿ, ಶೀರ್ಷಿಕೆ, ಅಥವಾ ಶೀರ್ಷಿಕೆಯಡಿಯಲ್ಲಿ ಬರುವ ಸುದ್ದಿ ಲೇಖನಗಳು ಆಯಾ ಮಾಧ್ಯಮ ಸಂಸ್ಥೆಗಳ ಆಸ್ತಿಯಾಗಿದ್ದು ಅವುಗಳ ಸಂಪೂರ್ಣ ಹಕ್ಕು ಸ್ವಾಮ್ಯ ಆ ಸಂಸ್ಥೆಯ ಮಾಲೀಕರಿಗೆ ಸೇರಿರುತ್ತದೆ.
ವರದಿ: ಚಂದ್ರ ವಿಜಯ್