ಟೂಲ್ ಕಿಟ್ ಪ್ರಕರಣ: ಕಿರಿಯ ಪರಿಸರವಾದಿಗೆ ಜಾಮೀನು, ನ್ಯಾಯಾಲಯ ಹೇಳಿದ್ದಾದ್ರೂ ಏನು?

೨೨ ನೇ ತಾರೀಖು ಮಂಗಳವಾರದಂದು ದೆಹಲಿ ಉಚ್ಛ ನ್ಯಾಯಾಲಯ ಕಿರಿಯ ಪರಿಸರ ಕಾರ್ಯಕರ್ತೆ ದಿಶಾ ರವಿ ಗೆ ಜಾಮೀನು ನೀಡಿದೆ. ರೈತರ ಪ್ರತಿಭಟನೆಯ ವೇಳೆ ಟೂಲ್ ಕಿಟ್ ಸಾಮಾಜಿಕ ಜಾಲ ತಾಣಗಳಲ್ಲಿ ಸೋರಿಕೆ ಮಾಡಿರುವ ಕಾರಣದಿಂದಾಗಿ, ಇವಳನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯ ಯಾವ ಆಧಾರದ ಮೇಲೆ ದಿಶಾ ಗೆ ಜಾಮೀನು ನೀಡಿದೆ, ವ್ಯಕ್ತಿಯ ವಾಗ್ ಸ್ವಾತಂತ್ರದ ಕುರಿತು ದೆಹಲಿ ಕೋರ್ಟ್ ಹೇಳಿರುವುದಾದ್ರು ಏನು?

೧. ಈ ಪ್ರಕರಣದಲ್ಲಿ ಕಡಿಮೆ ಸಾಕ್ಷಿ ಮತ್ತು ಸಾಕ್ಷಿಗಳಲ್ಲಿ ಯಾವುದೇ ಹುರಳು ಕಂಡು ಬಂದಿಲ್ಲ. ಆದ್ದರಿಂದ ದಿಶಾ ಗೆ ನ್ಯಾಯಾಲಯ ಜಾಮೀನು ಕೊಟ್ಟಿದೆ.

೨. ಸರ್ಕಾರದ ನಿಲುವನ್ನ ಖಂಡಿಸಿದ ಮಾತ್ರಕ್ಕೆ, ದೇಶದ ಪ್ರಜೆಗಳನ್ನ ಬಂಧಿಸಲು ಸಾಧ್ಯವಿಲ್ಲ.

೩.  ಹೆಚ್ಚುವರಿ ಅಧಿವೇಶನದಲ್ಲಿ, ನ್ಯಾಯಾಧೀಶ ಧರ್ಮೇಂದರ್ ರಾಣ ಪರಿಸರ ಕಾರ್ಯಕರ್ತೆ ದಿಶಾ ರವಿ ಹತ್ತಿರ 1 ಲಕ್ಷದ ಮೂರು  ಕರಾರುಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದು,  ಕಿರಿಯ ಪರಿಸರ ವಾದಿಯನ್ನ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಿದ್ದಾರೆ.

೪. ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಅಹಿಂಸಾಚಾರ ಘಟನೆಗೂ, ದಿಶಾಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ನಿಖರವಾದ ಸಾಕ್ಷಿಯೂ ದೊರೆತಿಲ್ಲ. ಇವಳು  ಪ್ರೊ ಖಾಲಿಸ್ತಾನಿ, ಪೊಯೆಟಿಕ್ ಜಸ್ಟಿಸ್ ಫೌಂಡೇಶನ್, ಸಿಕ್ಸ್ ಫಾರ್ ಜಸ್ಟಿಸ್ ಸಂಸ್ಥೆಗಳ ಜೊತೆ ಸಂಪರ್ಕ ಹೊಂದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. 

೫. ಮಾತನಾಡುವ ಸ್ವಾತಂತ್ರದ ಹಕ್ಕು ಎಲ್ಲರಿಗೂ ಇದೆ. ಇದಕ್ಕೆ ಯಾವುದೇ ಬೇಲಿ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ. 

೬.  ಭಿನ್ನಾಭಿಪ್ರಾಯಗಳನ್ನ ವ್ಯಕ್ತ ಪಡಿಸುವ ಸ್ವಾತಂತ್ರ  ಆರ್ಟಿಕಲ್ 19 ರಲ್ಲಿ ಬರುತ್ತದೆ. ವಾಗ್ ಸ್ವಾತಂತ್ರಕ್ಕೆ ಜಗತ್ತಿನ ಪ್ರತಿಕ್ರಿಯೆಯು ಸಹ ಸೇರ್ಪಡೆಯಾಗುತ್ತದೆ. 

೭. ಪ್ರಜಾಪ್ರಭುತ್ವದ ದೇಶದಲ್ಲಿ, ಸರ್ಕಾರದ ಚಟುವಟಿಕೆಗಳ ಮೇಲೆ ಜನ ಸಾಮಾನ್ಯರು ಗಮನಹರಿಸಬಹುದಾಗಿದೆ

೮. ಕೃಷಿ ಕಾಯ್ದೆ ವಿರೋಧಿಸುವ ಪ್ರಕ್ರಿಯೆಯಲ್ಲಿ, ವೇದಿಕೆ ಹಂಚಿಕೊಂಡಿರುವ ಆಧಾರದ ಮೇರೆಗೆ, ದಿಶಾ ದೇಶದ್ರೋಹಿಗಳ ಜೊತೆ ಸೇರಿಕೊಂಡಿದ್ದಳು ಅಥವಾ ಹಿಂಸಾಚಾರದ ಘಟನೆಗೆ ಸಹಾಯ ಮಾಡಿದ್ದಳು ಎಂದು ಪರಿಗಣಿಸುವುದಕ್ಕೆ ಆಗುವುದಿಲ್ಲ. ಪೊಲೀಸರ ವಾದವನ್ನ ನ್ಯಾಯಾಲಯ ಈ ರೀತಿ ತಿರಸ್ಕರಿಸಿದೆ. 

ಬರಹ: ಶ್ರೀ ಹರ್ಷ