ಜ೨ ಕ್ಕೆ ಕಲ್ಪತರು ನಾಡಿಗೆ ಪ್ರಧಾನ ಸೇವಕ
ಜನವರಿ ೨ಕ್ಕೆ ಬೃಹತ್ ರೈತ ಸಮಾವೇಶಕ್ಕೆ ಪ್ರಧಾನ ಸೇವಕ
ಸ್ವಾಗತಕ್ಕೆ ಕಲ್ಪತರು ನಾಡು ಸಜ್ಜು.
ಜನವರಿ ಎರಡಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತುಮಕೂರಿಗೆ ಭೇಟಿ ನೀಡಲಿದ್ದು.
ಸ್ವರ್ಗೈಕ್ಯ ಡಾ॥ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ .
ನಂತರ ಮಠದ ವಿದ್ಯಾರ್ಥಿಗಳೊಂದಿಗೆ ೧೦ ನಿಮಿಷಗಳ ಕಾಲ ಸಂವಾದ ನಡೆಸಲಿದ್ದಾರೆ .
ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ .
ಇದೇ ವೇಳೆ ಕೃಷಿ ಸಮ್ಮಾನ್ ಯೋಜನೆಯ ನಾಲ್ಕನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ .
ರೈತ ಸಮಾವೇಶದಲ್ಲಿ ವಿವಿಧ ಆರು ರಾಜ್ಯಗಳ ೪೦ ಮಂದಿ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು .
ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ಸಾಧ್ಯತೆ ಇದ್ದು ಸಕಲ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ .
ರಾಜ್ಯದ ಮೂಲೆಮೂಲೆಗಳಿಂದ ಬರುವವರಿಗಾಗಿ ಒಂದು ಸಾವಿರ ಕೆಎಸ್ಆರ್ ಟಿಸಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ .