ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರ ಶಿಪಾರಸು.
ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಕೇಂದ್ರ ಸಚಿವ ಸಂಪುಟ ಬುದವಾರ ಅನುಮೊದನೆ ನೀಡಿದೆ.
ಪುದುಚೇರಿ ವಿದಾನಸಭೆಯನ್ನು ರಾಷ್ಟ್ರಪತಿಗಳ ಅನುಮತಿಯೊಂದಿಗೆ ವಿಸರ್ಜಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಪತ್ರೀಕಾಗೋಷ್ಟಿಯಲ್ಲಿ ತಿಳಿಸಿದರು. ಸದ್ಯದಲ್ಲಿ ಚುನಾವಣೆ ನಡೆಯಲಿದ್ದು ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಹೇಳಿದರು.
ಪೆಬ್ರವರಿ ೨೨ರಂದು ಬಹುಮತ ಸಾಬೀತು ಪಡಿಸಲಾಗದೆ ಪುದುಚೇರಿ ಮುಖ್ಯ ಮಂತ್ರಿ ಎ. ನಾರಾಯಣ ಸ್ವಾಮಿ ರಾಜೀನಾಮೆ ನೀಡಿದ್ದರು. ಮತ್ತು ಈ ಕೇಂದ್ರಾಡಳಿತ ಪ್ರದೇಶದ ಸರಕಾರದ ಅವದಿ ಇನ್ನೆರಡು ತಿಂಗಳಲ್ಲಿ ಮುಕ್ತಾಯಗೊಳ್ಳಲಿರುವ ಕಾರಣ ಯಾವುದೆ ಪ್ರತಿಪಕ್ಷಗಳು ಸರಕಾರ ರಚಿಸಲು ಸಿದ್ದರಿರಲಿಲ್ಲ. ಹಾಗಾಗಿ ರಾಷ್ಟ್ರಪತಿ ಆಳ್ವಿಕೆಗೆ ಅನುಮೊದನೆ ನೀಡಲಾಗಿದೆ. ರಾಷ್ಟ್ರಪತಿಗಳು ಎ.ನಾರಾಯಾಣ ಸ್ವಾಮಿ ಮತ್ತು ಅವರ ಮಂತ್ರೀಮಂಡಲದ ಸದಸ್ಯರ ರಾಜೀನಾಮೆಯನ್ನ ಪೆಬ್ರವರಿ ೨೩ ರಂದು ಸ್ವೀಕರಿಸಿದ್ದಾರೆ.
ವರದಿ: ಪ್ರೀತಿಕಾ ಹೆಗ್ಡೆ