ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿ ಹೋಗಿದ್ದೆಲ್ಲಿ? : ಮಮತಾ ಬ್ಯಾನರ್ಜಿ

ಕೆಲವು ಸಂಸ್ಥೆಗಳ ಸಹಾಯದಿಂದ  ಕೇಂದ್ರ ಸರ್ಕಾರವು ನಮ್ಮನ್ನು ಹತ್ತಿಕಲು ಮತ್ತು ಬೆದರಿಸಲು ಪ್ರಯತ್ನಿಸುತ್ತಿದೆ. ಆದರೆ ನಾವು ಅವರಿಗೆ ಹೆದರುವುದಿಲ್ಲ. ಬಿಜೆಪಿ ಒಂದು ರಾಜಕೀಯ ಪಕ್ಷವಲ್ಲ, ಸುಳ್ಳಿನ ಕಸದಬುಟ್ಟಿ”  ಎಂದು  ಕೇಂದ್ರದ ವಿರುದ್ದ ಕಿಡಿ ಕಾರಿದ ಮಮತಾ ಬ್ಯಾನರ್ಜಿ ಕೆಲವು ಸಂಸ್ಥೆಗಳ ಸಹಾಯದಿಂದ  ಕೇಂದ್ರ ಸರ್ಕಾರವು ನಮ್ಮನ್ನು ಹತ್ತಿಕಲು ಮತ್ತು ಬೆದರಿಸಲು ಪ್ರಯತ್ನಿಸುತ್ತಿದೆ. ಆದರೆ ನಾವು ಅವರಿಗೆ ಹೆದರುವುದಿಲ್ಲ. ಬಿಜೆಪಿ ಒಂದು ರಾಜಕೀಯ ಪಕ್ಷವಲ್ಲ, ಸುಳ್ಳಿನ ಕಸದಬುಟ್ಟಿ”  ಎಂದು  ಕೇಂದ್ರದ ವಿರುದ್ದ ಕಿಡಿ ಕಾರಿದ ಮಮತಾ ಬ್ಯಾನರ್ಜಿ

Mamata Banarjee

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಆಡಳಿತದ  ಜನರ  ನಿರೀಕ್ಷೆ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾಗಿ  ಕೆಲಸ ಮಾಡುತ್ತಿಲ್ಲ. ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿಯ ಎಲ್ಲಾ ಹಣ ಎಲ್ಲಿ ಹೋಗಿದೆ? ನಿಧಿಯ ಭವಿಷ್ಯದ ಬಗ್ಗೆ ಯಾರಿಗಾದ್ರು ತಿಳಿದಿದೆಯೇ? ಲಕ್ಷ ಕೋಟಿ ಹಣ ಎಲ್ಲಿ ಹೋಗಿದ್ದೆಲ್ಲಿ? ಕೇಂದ್ರ ಸರ್ಕಾರ  ಈವರೆಗೂ ಇದರ ಆಡಿಟ್ ರಿಪೋರ್ಟ್ ಯಾಕೆ ಸಲ್ಲಿಸಿಲ್ಲ..? ಎಂದು ಪಚ್ಚಿಮ ಬಂಗಾಳ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಸವಾಲು ಹಾಕಿದ್ದಾರೆ.

ಕೇಂದ್ರವು ನಮಗೆ ಎಲ್ಲ ಬಗೆಯ ಉಪನ್ಯಾಸ ನೀಡುತ್ತದೆ. ಆದರೆ  ಕೋವಿಡ್ ಸಾಂಕ್ರಮಿಕ ರೋಗವನ್ನು ಎದುರಿಸಲು ಅವರು ನಮಗೆ ಏನು ನೀಡಿದ್ದಾರೆ ? ಎಂದು ಮಮತಾ ಕೇಂದ್ರ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.

ಚುನಾವಣೆ ಹತ್ತಿರವಿರುವುದರಿಂದ ಕೇಂದ್ರ ಸರ್ಕಾರ  ಪಚ್ಶಿಮ ಬಂಗಾಳವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು. ಇತರ ರಾಜ್ಯಗಳಿಗಿಂತ ನಮ್ಮ ರಾಜ್ಯಗಳ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ ಎಂದು ತೃಣಮೂಲ ಕಾಂಗ್ರೇಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ

ಕೆಲವು ಸಂಸ್ಥೆಗಳ ಸಹಾಯದಿಂದ  ಕೇಂದ್ರ ಸರ್ಕಾರವು ನಮ್ಮನ್ನು ಹತ್ತಿಕಲು ಮತ್ತು ಬೆದರಿಸಲು ಪ್ರಯತ್ನಿಸುತ್ತಿದೆ. ಆದರೆ ನಾವು ಅವರಿಗೆ ಹೆದರುವುದಿಲ್ಲ. ಬಿಜೆಪಿ ಒಂದು ರಾಜಕೀಯ ಪಕ್ಷವಲ್ಲ, ಸುಳ್ಳಿನ ಕಸದಬುಟ್ಟಿ”  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಭಾರತದಲ್ಲಿ ನಡೆಯುತ್ತಿರುವ ರೈತರ  ಪ್ರತಿಭಟನೆಯ ಕುರಿತು ಮಾತನಾಡಿದ ಮಮತಾ ಬ್ಯಾನರ್ಜಿ ಕೃಷಿ ಕಾನೂನು ವಿಷಯದಲ್ಲಿ ಬೇರೆ ಯಾವುದೇ ರಾಜಕೀಯ ಪಕ್ಷಗಳು ಬೆಂಬಲಿಸಲಿಲ್ಲ ಕೇಸರಿ ಪಡೆಗಳು ಅದನ್ನು ಹತ್ತಿಕಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ವರದಿ: ಬಸವರಾಜ ಕುಂಬಾರ

 

Tribute to Pranab (Da) Mukherjee, former President of India, on his birth anniversary. His demise has left a void in Indian politics. We miss him a lot

— Mamata Banerjee (@MamataOfficial) December 11, 2020