ಭಾರತದಲ್ಲಿ ನಡೆಯುವ ಬ್ರಿಕ್ಸ್ ಶೃಂಗ ಸಭೆಗೆ ಬೆಂಬಲ ವ್ಯಕ್ತ ಪಡಿಸಿದ ಚೀನಾ
೨೦೨೧ರ ಬ್ರಿಕ್ಸ ಶೃಂಗಸಭೆಯ ಅದ್ಯಕ್ಷತೆಯನ್ನ ಭಾರತವು ವಹಿಸಿಕೊಂಡಿದ್ದು ಈ ವರ್ಷದ ಶೃಂಗಸಭೆಗೆ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ನೆರೆಯ ರಾಷ್ಟ್ರ ಚೀನಾ ಭಾರತಕ್ಕೆ ಬೆಂಬಲ ಸೊಚಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಚೀನಾದ ನಡುವೆ ಗಡಿ ಸಂಘರ್ಷ ನಡೆಯುತ್ತಿದ್ದು. ಇದೆಲ್ಲದರ ನಡುವೆ ಚೀನಾ ಈ ವರ್ಷ ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗ ಸಭೆಗೆ ಬೆಂಬಲ ವ್ಯಕ್ತ ಪಡಿಸಿದೆ. ಇದರೊಂದಿಗೆ ವಿವಿಧ ಕ್ಷೇತ್ರಗಳ ಅಭಿವೃದ್ದಿಗೆ ಭಾರತ ಮತ್ತು ಇತರ ಸದಸ್ಯ ರಾಷ್ಟ್ರಗಳ ಜೊತೆ ಕೆಲಸಮಾಡಲು ತಾನು ಸಿದ್ದ ಎಂದು ತಿಳಿಸಿದೆ. ಮುಂದಿನ ದಿನಗಳಲ್ಲಿ ಕೊವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬಂದರೆ ಈ ವರ್ಷದ ದ್ವಿತಿಯಾರ್ದದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿಂಗ್ ಪಿನ್ ಅವರು ಶೃಂಗ ಸಭೆಗಾಗಿ ಭಾರತಕ್ಕೆ ಬೇಟಿ ನೀಡುವ ನಿರೀಕ್ಷೆಯಿದೆ.
ಗಡಿ ಸಂಘರ್ಷ ಶೃಂಗಸಭೆಯ ಮೇಲೆ ಪರಿಣಾಮ ಬೀರುತ್ತದೆಯೆ ಅಥವಾ ಇಲ್ಲವೆ, ಅನ್ನುವ ಪ್ರಶ್ನೆಗೆ ಪ್ರತಿಕ್ರೀಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ, ಬ್ರಿಕ್ಸ್ ನ ಕಾರ್ಯವಿಧಾನಕ್ಕೆ ಚೀನಾ ಹೆಚ್ಚಿನ ಮಹತ್ವ ನೀಡುತ್ತದೆ. ಮತ್ತು ಆರ್ಥಿಕ, ರಾಜಕೀಯ, ಮಾನವೀಯ ಚೌಕಟ್ಟಿನಲ್ಲಿ ಭಾರತ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ಸಹಕರಿಸಲು ಚೀನಾ ಸಿದ್ದವಿದೆ ಎಂದರು.
ವರದಿ : ಪ್ರೀತಿಕಾ ಹೆಗ್ಡೆ