ಅನಾರೋಗ್ಯಕ್ಕೆ ತಡೆ ಆರೋಗ್ಯ ಕಡೆ ನಡೆ: ನಮೋ ವೆಬಿನಾರ್
22 ನೇ ತಾರೀಖು ಮಂಗಳವಾರದಂದು, ವೆಬಿನಾರ್ ನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಜೆಟ್ ಅನುಷ್ಠಾನದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕಾಣಬೇಕೆನ್ನುವುದು ಸರ್ಕಾರದ ನಿಲುವಾಗಿದೆ, ಇದರ ಕಡೆಗೆ ಹೆಚ್ಚಾಗಿ ಗಮನ ಹರಿಸುತ್ತಿದ್ದೇವೆ ಎಂದು ಹೇಳಿದರು.
ಸರ್ಕಾರದ ಗುರಿ
ಭಾರತ ದೇಶ ಆರೋಗ್ಯಕರವಾಗಿರಬೇಕೆಂದರೆ, ಸರ್ಕಾರ ನಾಲಕ್ಕು ಅಂಶದ ಕಡೆಗೆ ಗಮನ ಹರಿಸುತ್ತಿದೆ. ರೋಗಗಳಿಂದ ದೂರ ನಿಲ್ಲುವುದು, ಅನಾರೋಗ್ಯವನ್ನು ತಡೆಗಟ್ಟುವುದು. ಆರೋಗ್ಯ ಇಲಾಖೆಯನ್ನ ವಿಸ್ತರಿಸುವುದು, ಅಧಿಕ ಪ್ರಮಾಣದಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳುವುದು, ಬಡವರಿಗೆ ಚಿಕಿತ್ಸೆ ನೀಡಲು ಹಿಂಜರಿಯಕೂಡದು. ಬುಡಕಟ್ಟು ಪ್ರದೇಶಗಳಲ್ಲಿ ಮಿಷನ್ ಇಂದ್ರಧನುಷ್ ವಿಸ್ತರಿಸುವುದು.
ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ
೨೦೨೧-೨೨ ವರ್ಷದ ಬಜೆಟ್, ಯಾವ? ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡುತ್ತದೆ ಮತ್ತೆ ಯಾಕೆ? ಎನ್ನುವುದರ ಸ್ಪಷ್ಟ ಚಿತ್ರಣಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಜೆಟ್ ನ ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಇದರಲ್ಲಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ. ಸೋಮವಾರದಂದು ರಕ್ಷಣಾ ಸೆಕ್ಟರ್ ಕುರಿತು ಪ್ರಧಾನ ಮಂತ್ರಿ ಮಾತನಾಡಿದ್ದರು.
ವೆಬಿನಾರ್ ನ ಮುಖ್ಯಾಂಶಗಳು:
೧. ಈ ವರ್ಷದ ಬಜೆಟ್ ನಲ್ಲಿ, ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಪ್ರಾಮುಖ್ಯತೆ ಕೊಟ್ಟಿದೆ. ದೇಶದ ಪ್ರಜೆಗಳಿಗೆ ಉನ್ನತ ಮಟ್ಟದ ಆರೋಗ್ಯದ ಸೌಲಭ್ಯವನ್ನು ಒದಗಿಸಬೇಕೆನ್ನುವುದು ಬಜೆಟ್ ನ ಗುರಿ.
೨. ಔಷಧಿ, ಮದ್ದು ಉಪಕರಣಗಳಿಂದ ಹಿಡಿದು ವೈದ್ಯರು, ಸಿಬ್ಬಂದಿಗಳವರೆಗೂ ಎಲ್ಲಾ ರೀತಿಯ ವ್ಯವಸ್ಥೆ ಮುಂಚಿತವಾಗಿಯೇ ಕಲ್ಪಿಸಿರಬೇಕು. ತುರ್ತು ಸಂದರ್ಭದಲ್ಲಿ ಜನರು ತೊಂದರೆಗೆ ಸಿಲುಕಬಾರದು.
೩. ಕೊರೊನ ನಮಗೆ ಸರಿಯಾದ ಪಾಠ ಕಲಿಸಿದೆ, ಆದ್ದರಿಂದ ನಾವು ಸ್ವಾವಲಂಬಿಯಾದ ಲಸಿಕೆಗಳನ್ನ ಹೆಚ್ಚಾಗಿ ತಯಾರಿಸಬೇಕು.
೪.ಅನಾರೋಗ್ಯದಿಂದ ಭಾರತ ಸಂಪೂರ್ಣವಾಗಿ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ, ನಾವು ನಾಲಕ್ಕು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಅನಾರೋಗ್ಯಕ್ಕೆ ತಡೆ ಆರೋಗ್ಯ ಕಡೆಗೆ ನಡೆ ಎನ್ನುವುದು ನಮ್ಮ ಮೊದಲ ಆದ್ಯತೆ.
ಬರಹ: ಶ್ರೀ ಹರ್ಷ