ಬೆಂಗಳೂರು ರೈಲು ನಿಲ್ದಾಣಕ್ಕೆ ಬಂತು ಹೊಸ ಸೌಲಭ್ಯ......

ಬೆಂಗಳೂರಿನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲಿನ ಹೊರಭಾಗಗಳನ್ನು  ಸ್ವಯಂ ಚಲಿತವಾಗಿ ಸ್ವಚ್ಛಗೊಳಿಸುವ ನೂತನ  ಸೌಲಭ್ಯ ಬುಧವಾರ ಆರಂಭಗೊಂಡಿದೆ.

ಈ ಅಟೊಮ್ಯಾಟಿಕ್ ಕೋಚ್ ವಾಷಿಂಗ್ ಪ್ಲಾಂಟ್ ಅತಿ ಕಡಿಮೆ ನೀರು ಬಳಸಿಕೊಂಡು ಬೋಗಿಗಳನ್ನು  ಸ್ವಚ್ಛಗೊಳಿಸಲಿದೆ. ಯಾವ ಮಾನವ ಸಹಾಯವನ್ನು ಬಳಸಿಕೊಳ್ಳದೆ ಸ್ವಚ್ಛತೆ ನಡೆಸುವ ಆಧುನಿಕ ಉಪಕರಣ ಇದಾಗಿದೆ.ಕರ್ನಾಟಕದಲ್ಲಿ  ಈ ಮಾದರಿಯ ರೈಲ್ವೆ ಕೋಚ್ ಸ್ವಚ್ಛಗೊಳಿಸುವ  ಮೊದಲ ಸೌಲಭ್ಯ ಇದಾಗಿದೆ.

ಇದೇರೀತಿಯ ಪ್ಲಾಂಟ್ ಗಳನ್ನು ಯಶವಂತ್ ಪುರ  ಹಾಗೂ ಬೈಯಪ್ಪನಹಳ್ಳಿಯ ನೂತನ  ಹೊಸ ನಿಲ್ದಾಣದಲ್ಲಿ ಮುಂದೆ ಅಳವಡಿಸಲು ಯೋಜನೆ ರೂಪಿಸಿದ್ದೇವೆ ಎಂದು ಎ ಕೆ ಸಿಂಗ್  ಸುದ್ದಿಗಾರರಿಗೆ ತಿಳಿಸಿದರು .

ಪ್ರತಿ ಕೋಚ್ ಸ್ವಚ್ಛತೆಗೆ ತಗಲುವ ವೆಚ್ಚ 42.91ರೂ.....

ಇದರಲ್ಲಿ ಸಂಪೂರ್ಣ ಕೋಚ್ ಸ್ವಚ್ಛಗೊಳ್ಳುತ್ತದೆ.ಅಲ್ಲದೆ ಈ ಯಂತ್ರ ಅತ್ಯಂತ ಅಗ್ಗದಲ್ಲಿ ಸ್ವಚ್ಛತೆ ಮಾಡಿಮುಗಿಸುತ್ತದೆ.
ಮಾನವ ಶಕ್ತಿಯನ್ನು ಬಳಸಿಕೊಂಡು ಪ್ರತಿ ಕೋಚ್ ಸ್ವಚ್ಛಗೊಳಿಸಲು 214.78 ರೂ ತಲುಪುತ್ತದೆ.ಆದರೆ ಈ ತಂತ್ರಜ್ಞಾನ 42.91 ರೂ  ವೆಚ್ಚವಾಗುತ್ತದೆ ಎಂದು ಹಿರಿಯ ವಿಭಾಗಿಯ ಮೆಕಾನಿಕ್ ಇಂಜಿನಿಯರ್   ಜಯಂತ್  ರಾಮಚಂದ್ರ ತಿಳಿಸಿದ್ದಾರೆ .