ಇನ್ಮುಂದೆ ಬಿಎಂಟಿಸಿ ಗೆ ಪವಾರ್ ಸ್ಟಾರ್ ನೂತನ ರಾಯಭಾರಿ...
ಬಿಎಂಟಿಸಿ ನೂತನ ಬ್ರಾಂಡ್ ಅಂಬಾಸಿಡರ್ ಆಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಯ್ಕೆಯಾಗಿದ್ದಾರೆ.ನೂತನ ಬಸ್ ಲೇನ್ ಬಗ್ಗೆ ಜಾಗೃತಿ ಮೂಡಿಸಲು ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರನ್ನು ಬಿಎಂಟಿಸಿ ಅಪ್ರೋಚ್ ಮಾಡಿದ್ದರು.
ಪುನೀತ್ ರಾಜಕುಮಾರ್ ಒಂದು ರೂಪಾಯಿ ಹಣ ತೆಗೆದುಕೊಳ್ಳದೆ ಬ್ರಾಂಡ್ ಅಂಬಾಸಿಡರ್ ಆಗಲು ಒಪ್ಪಿಕೊಂಡಿದ್ದಾರೆ.ಪುನೀತ್ ರಾಜಕುಮಾರ್ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ವ್ಯವಸ್ಥಾಪಕರಾದ ನಿರ್ದೇಶಕಿ ಸಿ.ಶಿಖಾ ಹಾಗೂ ಭದ್ರತೆ ಮತ್ತು ಜಾಗೃತಿ ನಿರ್ದೇಶಕ ಅನುಪಮ್ ಅಗರ್ವಾಲ್ ಭೇಟಿ ಮಾಡಿ ಅಪ್ರೋಚ್ ಮಾಡಿದ್ದರು.