ಉಕ್ರೇನ್ ವಿಮಾನ ಪತನ : ಇರಾನ್ ಪಾತ್ರದ ಬಗ್ಗೆ ಸಾಕ್ಷಿ ನೀಡಿದ ಅಮೆರಿಕಾ...

ಟೆಹ್ರಾನ : ಉಕ್ರೇನ್‌ನ ಜೆಟ್‌ಲೈನರ್ ವಿಮಾನ ಪತನ ಪ್ರಕರಣದಕ್ಕೆ ತಿರುವು ಸಿಕ್ಕಿದೆ. ನಿಲ್ದಾಣಕ್ಕೆ ಮರಳಲು ಯತ್ನಿಸುತ್ತಿದ್ದ ವಿಮಾನವನ್ನು ಇರಾನ್ ಆಕಸ್ಮಿಕವಾಗಿ ಹೊಡೆದುರುಳಿಸಿದೆ ಎಂದು ಅಮೆರಿಕ ಹೇಳಿದೆ.

ಜನವರಿ 8ರಂದು ಇರಾನ್‌ನಲ್ಲಿ ಟೆಹರಾನ್‌ನಿಂದ ಉಕ್ರೇನ್‌ಗೆ ಹೊರಟಿದ್ದ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದಲ್ಲಿಯೇ ಪತನಗೊಂಡಿತ್ತು. 168 ಪ್ರಯಾಣಿಕರು ಮತ್ತು 9 ಸಿಬ್ಭಂದಿಗಳು ಮೃತಪಟ್ಟಿದ್ದರು.

ಅಮೆರಿಕ ಇರಾನ್ ಈ ವಿಮಾನ ಪತನದ ಹಿಂದಿದೆ ಎಂದು ಆರೋಪಿಸಿದೆ. ವಿಮಾನ ಪತನಗೊಳ್ಳುವ ಕೆಲವೇ ಕ್ಷಣಗಳ ಮೊದಲು ಎರಡು ಕ್ಷಿಪಣಿಗಳನ್ನು ಇರಾನ್ ಹಾರಿಸಿದೆ ಎಂದು ಅಮೆರಿಕ ಹೇಳಿದೆ. ಇದನ್ನು ಉಪಗ್ರಹದ ಕ್ಯಾಮರಾಗಳು ಸೆರೆ ಹಿಡಿದಿವೆ ಎಂದು ಸಾಕ್ಷಿಯನ್ನು ನೀಡಿದೆ.