ತಮಿಳು ನಟ ವಿಜಯ್ ಮನೆಯ ಮೇಲೆ ಐಟಿ ದಾಳಿ -ಸಿನಿಮಾ ಶೂಟಿಂಗ್ ಮಧ್ಯದಲ್ಲೇ ವಿಚಾರಣೆ
ತಮಿಳು ನಟ ವಿಜಯ್ ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು ನಿನ್ನೆಯಿಂದ (ಫೆ.5) ಅವರ ಎರಡು ಮನೆಗಳಲ್ಲೂ ಐಟಿ ತಂಡ ದಾಖಲೆಗಳನ್ನು ಪರಿಶೀಲಿಸುತ್ತಿದೆ . ವಿಜಯ್ ಅವರು ಅವರ ಪನೈಯೂರ್ ನಿವಾಸದಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗುತ್ತಿದೆ .
ಕಳೆದ ವರ್ಷ ಬಿಡುಗಡೆಯಾದ ಬ್ರಿಗೆಲ್ ಸಿನಿಮಾ ನಿರ್ಮಿಸಿದ್ದ ಎಜಿಎಸ್ ಸಿನ್ಮಾ ಸಂಸ್ಥೆಯ ಕಚೇರಿಗಳಲ್ಲೂ ಸಹ ಶೋಧ ಕೈಗೊಂಡಿದ್ದು ,ಸದ್ಯ ಎಜಿಎಸ್ ಸಂಸ್ಥೆಗೆ ಸಂಬಂಧಿಸಿದ 20 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ .
ನಿನ್ನೆಯೇ ವಿಜಯ್ ಅವರ ಮುಂಬರುವ ಮಾಸ್ಟರ್ ಚಿತ್ರದ ಶೋಟಿಂಗ್ ನಡುವೆಯೇ ಐಟಿ ಅಧಿಕಾರಿಗಳು ವಿಜಯ್ ಅವರನ್ನು ವಿಚಾರಣೆ ನಡೆಸಿದ್ದು ,ಸದ್ಯಕ್ಕೆ ಚಿತ್ರದ ಚಿತ್ರೀಕರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ .
ಕಳೆದ ವರ್ಷ ವಿಜಯ್ ನಟಿಸಿದ್ದ ಬಿಗಿಲ್ ಸಿನಿಮಾವನ್ನು ನಿರ್ಮಿಸಿದ್ದ ಎಜಿಎಸ್ ಸಂಸ್ಥೆ ವಿರುದ್ಧ ತೆರಿಗೆ ವಂಚನೆ ಕೇಳಿ ಬಂದಿದ್ದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ .