ಭಾರತದ ಆರ್ಥಿಕ ತಳಹದಿ ಸುಭದ್ರ : ಆರ್ಥಿಕತೆ ಮತ್ತೆ ಪುಟಿದೇಳಲಿದೆ : ಪ್ರಧಾನಿ ಮೋದಿ ವಿಶ್ವಾಸ.
ನವದೆಹಲಿ : ಕಳೆದ ಹನ್ನೊಂದು ವರ್ಷಗಳಲ್ಲಿ ದೇಶದ ಜಿಡಿಪಿ ಭಾರೀ ಕುಸಿತ ಕಂಡಿದೆ ಎಂಬ ಟೀಕೆಯ ಬೆನ್ನಲ್ಲೇ ಭಾರತದ ಆರ್ಥಿಕ ಮೂಲಸೂತ್ರ ಭದ್ರವಾಗಿದೆ. ಅಲ್ಲದೇ ದೇಶದ ಆರ್ಥಿಕ ಸ್ಥಿತಿ ಚೇತರಿಕೆ ಕಾಣುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗುರುವಾರ ಪ್ರಧಾನಿ ಮೋದಿ ಅವರು ಆರ್ಥಿಕ ತಜ್ಞರು, ಮತ್ತು ಹೂಡಿಕೆದಾರರು, ಉದ್ಯಮಿಗಳು, ನೀತಿ ಆಯೋಗದ ಪರಿಣತರ ಜತೆ ಮಹತ್ವದ ಮಾತುಕತೆ ನಡೆಸಿದ್ದು, 2024ರೊಳಗೆ ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗೆ ತಲುಪಿಸುಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.
ನಾವು ಎಲ್ಲರು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಮತ್ತು ದೇಶದ ಆರ್ಥಿಕ ಅಭಿವೃದ್ದಿ ಕುರಿತು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.