ದೀಪಿಕಾಗೇಕೆ ಶೈನ್ ಮೇಲೆ ಮುನಿಸು......!

ತಾವು ಕೊಟ್ಟಿದ್ದ ಉಡುಗೊರೆಯನ್ನು ಶೈನ್ ಜೋಪಾನವಾಗಿ ನೋಡಿಕೊಂಡಿಲ್ಲ ಎಂದು ದೀಪಿಕಾ ಬೇಸರ ಮಾಡಿಕೊಂಡಿದ್ದಾರೆ. ಹರೀಶ್ ರಾಜ್, ಕುರಿ ಪ್ರತಾಪ್ ಮತ್ತು ಕಿಶನ್ ಎಲ್ಲರೂ ಒಟ್ಟಾಗಿ ಕುಳಿತುಕೊಂಡು ಬಟ್ಟೆ ಸರಿಯಾಗಿ ಜೋಡಿಸಿಲ್ಲ ಎಂದು ಪ್ರಿಯಾಂಕಾರನ್ನು ಬೈಯುತ್ತಿದ್ದರು. ಆಗ ದೀಪಿಕಾಗೆ ತಾವು ಶೈನ್‍ಗೆ ಕೊಟ್ಟಿದ್ದ ಕಡಗ ಸಿಕ್ಕಿದೆ. ಅದನ್ನು ನೋಡಿದ ತಕ್ಷಣ ದೀಪಿಕಾ, ಇದನ್ನು ನಾನು ನಿಮಗೆ ಕೊಟ್ಟರೆ ಇಲ್ಲಿ ತಂದು ಬಿಸಾಡಿದ್ದೀರಾ ಎಂದು ಹೇಳಿ ಮುನಿಸಿಕೊಂಡಿದ್ದಾರೆ.ಆಗ ಶೈನ್, ಅದು ನನ್ನ ಫೇವರೆಟ್ ನಾನು ಬಿಸಾಡಿಲ್ಲ. ನನ್ನ ಪಕ್ಕದಲ್ಲಿಯೇ ಇಟ್ಟುಕೊಂಡಿದ್ದೆ. ಆದರೆ ಅದು ಹೇಗೆ ಇಲ್ಲಿಗೆ ಬಂದು ಗೊತ್ತಿಲ್ಲ ಎಂದು ದೀಪಿಕಾರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಈ ವೇಳೆ ದೀಪಿಕಾ ಅಡುಗೆ ಮನೆಗೆ ಹೋಗಿ ನೀರು ಕುಡಿಯುತ್ತಿದ್ದರು. ಆಗ ದೀಪಿಕಾರನ್ನು ಶೈನ್ ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ.