ಭೂಮಿ ಶೆಟ್ಟಿ ಅಲಿಯಾಸ್ ಪಮ್ಮಿಗೆ 10 ದಿನದ ಮದುವೆ ಬೇಕಂತೆ !
ಈ ವಾರ ಬಿಗ್ ಬಾಸ್ ಶಾಲೆಯ ಟಾಸ್ ಎಲ್ಲರಿಗೂ ಗೊತ್ತೇ ಇದೆ .ಎಲ್ಲಾ ಕಂಟೆಸ್ಟೆಂಟ್ ಚಿಕ್ಕ ಚಿಕ್ಕ ಮಕ್ಕಳಾಗಿ ಒಬ್ಬೊಬ್ಬರು ಒಂದೊಂದು ಪಾತ್ರವನ್ನು ಸೃಷ್ಟಿಸಿಕೊಂಡು ಆಟ ಆಡುತ್ತಾರೆ .ಅಲ್ಲದೆ ಬಿಗ್ ಬಾಸ್ ಟೈಮ್ ಟೇಬಲ್ ಪ್ರಕಾರ ಕಂಟೆಸ್ಟ್ ಗಳೇ ಟೀಚರ್ ಸಹ ಆಗ್ತಾರೆ .
ಆದರೆ ಇಲ್ಲಿ ಕುತೂಹಲದ ವಿಚಾರವೇನೆಂದರೆ ಶೈನ್ ಶೆಟ್ಟಿ ಪ್ರವೀಣರಾಗಿ ಹಾಗೂ ಭೂಮಿ ಶೆಟ್ಟಿ ಪಮ್ಮಿ ಯಾಗಿ ತಮ್ಮ ಪಾತ್ರಗಳನ್ನು ಸೃಷ್ಟಿಸಿರುತ್ತಾರೆ .ಆಟವೆಲ್ಲಾ ಮುಗಿದ ನಂತರವೂ ಸಹ ಭೂಮಿಗೆ ತಮ್ಮ ಪಾತ್ರದಿಂದ ಹೊರ ಬರಲು ಇಷ್ಟವಿಲ್ಲ ಎನಿಸುತ್ತದೆ.
ಯಾಕೆ ಅಂತೀರಾ , ಪಮ್ಮಿ ಮತ್ತು ಪ್ರವೀಣ 10 ದಿನಗಳ ಕಾಲ ಮದುವೆಯಾಗಬೇಕಂತೆ ಅದಕ್ಕಾಗಿ ಅವರು 10 ದಿನ ಚೌಟ್ರಿ ಬುಕ್ ಮಾಡ್ತಾರಂತೆ . ಮದುವೆ ನಂತರ ಬೆಂಗಳೂರಿನಲ್ಲಿ ರಿಸೆಪ್ಷನ್ ಇರುತ್ತಂತೆ , ಆಮೇಲೆ ಒಂದು ತಿಂಗಳು ಪಮ್ಮಿ ಮತ್ತು ಪ್ರವೀಣ ಫುಲ್ ಬಿಝಿ ಆಗ್ತಾರಂತೆ .