ತಾವರಗೇರಾ ಪಟ್ಟಣದಲ್ಲಿ ಶ್ರೀಶಶಿಧರಸ್ವಾಮಿ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ...

ತಾವರಗೇರಾ ಪಟ್ಟಣದಲ್ಲಿ ಶ್ರೀಶಶಿಧರಸ್ವಾಮಿ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 1993-94ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಮಾತನಾಡಿದ ಶಿಕ್ಷಣ ಪಡೆದು ಭವಿಷ್ಯವನ್ನು ಕಟ್ಟಿಕೊಳ್ಳಲು ಸುಲಭವಾಗಿ ಮುಖ್ಯವಾಗಿದೆ ಹಾಗೂ ತಂದೆ ತಾಯಿ ಹಾಗೂ ಗುರುಗಳು ಗೌರವ ಕೊಡುವ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮುಖ್ಯವಾಗಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಸೊಮಲಿಂಗಪ್ಪ ತುರ್ವಿಹಾಳ ಹೇಳಿದರು.ಸಂಸ್ಥೆಯ ಕಾರ್ಯದರ್ಶಿ ಮಲ್ಲನಗೌಡ ಓಲಿ ಮಾತನಾಡಿ ಗುರುಗಳು ಹಾಗೂ ಶಿಷ್ಯರಿಗೆ ಸರಿಯಾದ ಮಾರ್ಗದರ್ಶನಕ್ಕೆ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಹಾಗೂ ಗುರು ಶಿಷ್ಯರ ಒಡೆನಾಟ ಮತ್ತು ಸಂಸ್ಥೆಗೆ ಗೌರವ ಸಮರ್ಪಣೆ ಮಾಡಿದಂತಾಗುತ್ತದೆ ಎಂದು ಹೇಳಿದರು.ಗೌತಮ್ ಜೈನ, ಅಮರೇಗೌಡ,ಕಾಶಿನಾಥ್ ನಾಗಲಿಕರ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಮಮ್ಮದ್ ರಫೀಕ್ ಮತ್ತು ಸುರೇಶ್ ಯೋಧರನ್ನು ಸ್ನೇಹಿತರ ಬಳಗ ಹಾಗೂ ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶೇಖರಗೌಡ ಪೊಲೀಸ್ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಪ್ರಾಚಾರ್ಯ ಶಾಮಣ್ಣ ಶಿರವಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ನಿವೃತ್ತಿ ಹೊಂದಿದ ಹಾಗೂ ಸೇವೆಯಲ್ಲಿರುವ ಗುರುಗಳನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಎಸ್ಎಸ್ ಅರಳಿ,ಗಂಗಯ್ಯಬಡಿಗೇರ, ಭೀಮ್ ರಾವ್ ಕುಲಕರ್ಣಿ,ಬಸವಂತಪ್ಪ ಹಾದಿಮನಿ,ಶರಣಪ್ಪ ನವಲಗುಂದ,ಆಂಜನೇಯ ಗಬ್ಬೂರ್ ,ದೇವೇಂದ್ರಪ್ಪ ಜೋಗಿನ,ಲಕ್ಷ್ಮಮ್ಮ ಕಟ್ಟಿಮನಿ,ಪ್ರೇಮ ಬುಜರಕರ,ದ್ಯಾಮಣ್ಣ ಆದರಮಗ್ಗಿ,ಪ್ರಾಚರ್ಯ ಆರ್ ಜೆ ಅಂಬಿಗರ,ಆಡಳಿತಾಧಿಕಾರಿ ಬಸನಗೌಡ ಪಾಟೀಲ್ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.ನಿರೂಪಣೆ ಚನ್ನಪ್ಪ ದಂಡಿನ ಹಾಗೂ ಯಮನಪ್ಪ ಸಿರವಾರ್ ಸ್ವಾಗತಿಸಿ ವಂದಿಸಿದರು

ವರದಿ ಶರಣಪ್ಪ ಕುಂಬಾರ ತಾವರಗೇರಾ