ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿಯಲು ಚಿಂತಿಸುತ್ತಿರುವ ಪ್ರಧಾನಿ ಮೋದಿ...
ಭಾರತದ ರಾಜಕೀಯ ವಲಯದಲ್ಲಿ ಸಾಮಾಜಿಕ ಮಾಧ್ಯಮಗಳ ಶಕ್ತಿಯನ್ನು , ಅವುಗಳ ಪ್ರಭಾವವನ್ನು ತೋರಿಸಿಕೊಟ್ಟವರು ಪ್ರಧಾನಿ ನರೇಂದ್ರ ಮೋದಿ. ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿರುವ ಮೋದಿ ಅಂತಾರಾಷ್ಟ್ರೀಯ ಸರ್ವೇಯೊಂದರ ಪ್ರಕಾರ ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿದ್ದಾರೆ. ಆದ್ರೆ ಪ್ರಧಾನಿ ಮೋದಿ ಭಾನುವಾರ ತಾವು ಸಾಮಾಜಿಕ ಮಾಧ್ಯಮಗಳಿಂದ ದೂರ ಇರಲು ಚಿಂತಿಸುತ್ತೀರುವುದಾಗಿ ಹೇಳಿದ್ದಾರೆ.
ಹೌದು, ಸೋಮವಾರ ಮೋದಿ ಅವರ ಟ್ವಿಟರ್ ಖಾತೆಯಲ್ಲಿ, ಸೋಷಿಯಲ್ ಮೀಡಿಯಾ ಗಳಿಂದ ದೂರ ಉಳಿಯಲು ಚಿಂತನೆ ನಡೆಸುತ್ತಿದ್ದೇನೆ. ಈ ಕುರಿತು ಮುಂದಿನ ದಿನಗಳಲ್ಲಿ ನಿಮಗೆ ತಿಳಿಸಲಾಗುವುದು ಎಂಬ ಅಚ್ಚರಿಯ ಸಂದೇಶ ಕಾಣಿಸಿಕೊಂಡಿದೆ.ಇದು ಅವರ ಅಭಿಮಾನಿಗಳಿಗೆ ಆಶ್ಚರ್ಯ ಉಂಟು ಮಾಡಿದೆ.
ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ನಾಯಕರಲ್ಲಿ ಪ್ರಧಾನಿ ಮೋದಿ ಮುಂಚೂಣಿಯಲಿದ್ದು, 4.4 ಕೋಟಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇನ್ನು ಭಾರತದ ರಾಜಕಾರಣಿಗಳ ಪೈಕಿ ಸಾಮಾಜಿಕ ಮಾಧ್ಯಮಗಳನ್ನು ಪ್ರಭಾವಶಾಲಿಯಾಗಿ ಬಳಿಸಿಕೊಂಡ ಕೀರ್ತಿ ಪ್ರಧಾನಿ ಅವರಿಗೆ ಸಲ್ಲುತ್ತದೆ.