ರೈಲು ನಿಲ್ದಾಣಗಳಲ್ಲಿ ಕರ್ನಾಟಕದ ಗೊಂಬೆಗಳು :ಚೀನಾದ ಬದಲು ಚನ್ನಪಟ್ಟಣದ ಗೊಂಬೆಗಳ ಪ್ರದರ್ಶನ
ಕಲೆಗಳ ತವರೂರಾದ ನಮ್ಮ ಕರ್ನಾಟಕದ ಚನ್ನಪಟ್ಟಣ ಗೊಂಬೆಗಳ ಕುರಿತು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹರ್ಷವನ್ನು ವ್ಯಕ್ತಪಡಿಸಿದ್ದರು.
ಚೀನಾದಿಂದ ಆಮದಾಗುತ್ತಿರುವ ಆಟಿಕೆಗಳನ್ನು ಬಹಿಷ್ಕರಿಸಿ ನಮ್ಮದೇ ರಾಜ್ಯದಲ್ಲಿ ತಯಾರಾಗುತ್ತಿರುವ ಆಟಿಕೆಗಳತ್ತ ಗಮನ ಕೊಡಬೇಕು ಇದರಿಂದ ನಮ್ಮ ಕಲೆಗೂ ಬೆಲೆ ಕೊಟ್ಟಂತಾಗುತ್ತದೆ ಹಾಗೂ ಇದರಿಂದ ನಮ್ಮವರಿಗೆ ಉದ್ಯೋಗಾವಕಾಶ ಕಲ್ಪಸಿಕೊಟ್ಟಂತಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದರು. ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಶ್ರೀಮಂತ ಸಂಪ್ರದಾಯವಿದೆ. ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರುವ ಅನೇಕ ಪ್ರತಿಭಾವಂತ ಮತ್ತು ನುರಿತ ಕುಶಲಕರ್ಮಿಗಳು ಇದ್ದಾರೆ ಎಂದು ಹೇಳುತ್ತಾ ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಮಾತನಾಡಿದರು.
ಇದೀಗ ಈ ಗೊಂಬೆಗಳನ್ನು ರೈಲು ನಿಲ್ದಾಣದಲ್ಲಿ ಪ್ರದರ್ಶಿಸಲು ರೈಲ್ವೆ ಇಲಾಖೆ ಸಿದ್ಧವಾಗಿದ್ದು ಈ ಬಗ್ಗೆ ಮೋದಿ ಬಹಳ ಸಂತೋಷವನ್ನ ವ್ಯಕ್ತಪಡಿಸಿದ್ದಾರೆ.
ಭಾರತವು ಆತ್ಮ ನಿರ್ಭರತೆಯತ್ತ ಸಾಗುತ್ತಿದೆ. ಕರ್ನಾಟಕದ ಚನ್ನಪಟ್ಟಣ ನಿಲ್ದಾಣದಲ್ಲಿ ಸ್ಥಳೀಯ ಆಟಿಕೆ ಗೊಂಬೆಗಳು, ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ರೈಲ್ವೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ
ಪ್ರಧಾನಿ ಮೋದಿ, ಭಾರತದ ಪ್ರತಿಭೆ, ಸಂಪ್ರದಾಯಗಳು ಮತ್ತು ಆಟಿಕೆಗಳನ್ನು ಪ್ರದರ್ಶಿಸಲು ಇದು ಉತ್ತಮ ಅಂಶವಾಗಿದೆ ಎಂದು ಶ್ಲಾಘಿಸಿದ್ದಾರೆ. ಚೀನಾದ ಆಟಿಕೆಯ ಬದಲು ಭಾರತದ ಆಟಿಕೆಗಳ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿರುವ ಬಗ್ಗೆ ಪ್ರಧಾನಿಯವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ
ವರದಿ:ಸಂಜಯ್.ಕೊಳ್ಳಿ