ಕಿರಿಯ ಪರಿಸರ ಕಾರ್ಯಕರ್ತೆ ಅರೆಸ್ಟ್: ರೈತರಿಂದ ಹೋರಾಟ

ನವೆಂಬರ್ 2020 ರಿಂದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತರು ಸತತವಾಗಿ  ಪ್ರತಿಭಟನೆಯನ್ನ ಮಾಡಿದ್ದರು. ಗಣರಾಜ್ಯೋತ್ಸವ ದಿನದಂದು ಪ್ರತಿಭಟನೆ ಹಿಂಸಾಚಾರದ ಘಟನೆಯಾಗಿ ತಿರುಗಿತ್ತು. ಟ್ರ್ಯಾಕ್ಟರ್ ರಾಲಿ ಪ್ರಕರಣದಿಂದಾಗಿ ರೈತರ ಹೋರಾಟ ಬೇರೆ ರೂಪವೇ ಪಡೆದುಕೊಂಡಿತ್ತು. ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಹವಾಮಾನ ಕಾರ್ಯಕರ್ತೆ ದಿಶಾ ರವಿ ನ ಪೊಲೀಸರು ಬಂಧಿಸಿದ್ದು, ದಿಶಾ ನ ಬಿಡುಗಡೆ ಮಾಡಿ ಎಂದು ರೈತರು  ಹೋರಾಟ ಮಾಡುತ್ತಿದ್ದಾರೆ. 

ಕೆನಡಾ ದೇಶದೊಂದಿಗೆ ನಂಟು 

ಗಲಾಟೆಯ ಮುಖ್ಯ ಕೇಂದ್ರ ಬಿಂದು ಟೂಲ್ ಕಿಟ್ ಆಗಿತ್ತು , ಫೆಬ್ರವರಿ 3 ನೇ ತಾರೀಖಿನಂದು, ಸ್ವೀಡಿಷ್ ದೇಶದ ಹವಾಮಮಾನ ಕಾರ್ಯಕರ್ತೆ ಟ್ವಿಟ್ಟರ್ ನಲ್ಲಿ ಟೂಲ್ ಕಿಟ್ ಕುರಿತು ಮಾಹಿತಿ ಹಂಚಿಕೊಂಡ ನಂತರ, ದೆಹಲಿ ಪೊಲೀಸರಿಗೆ ಇದರ ಸುಳಿವು  ಸಿಕ್ಕಿತ್ತು. ಭಾರತದ ಹವಾಮಾನ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಕೆನಾಡಾದ ಹವಾಮಾನ,ಮಾನವ ಹಕ್ಕುಗಳ ಕಾರ್ಯಕರ್ತರೊಂದಿಗೆ ಶ್ಯಾಮೀಲಾಗಿದ್ದಾರೆ. ಕೆನಡಾ ದೇಶ ಖಾಲಿಸ್ತಾನಿ ಸಂಸ್ಥೆಗಳ ಜೊತೆ ಕೈ ಜೋಡಿಸಿದ್ದು, ಟೂಲ್ ಕಿಟ್ ನ ಸೃಷ್ಟಿಸಿ ಎಲ್ಲಾ ಕಡೆ ಹಂಚುವುದು ಈ ಗುಂಪಿನ ಒಟ್ಟಾರೆ ಗುರಿಯಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದರು. 

ಆಕ್ರೋಶ ವ್ಯಕ್ತ ಪಡಿಸುತ್ತಿರುವ ಜನರು 

ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ, ಇದರ ವಿರುದ್ಧ ಜನರು ಧ್ವನಿ ಎತ್ತಿದ್ದು, ಫೆಬ್ರವರಿ 13 ರಂದು ಬೆಂಗಳೂರಿನ ನಿವಾಸದಲ್ಲಿ ಪೊಲೀಸರು ದಿಶಾ ರವಿ ನ  ಅರೆಸ್ಟ್ ಮಾಡಿದ್ದರು. ಇವಳು ಕೆನಾಡಾದ ಮಹಿಳೆ ಜೊತೆ ಟೂಲ್ ಕಿಟ್ ಶೇರ್ ಮಾಡಿ, ಟ್ವಿಟ್ಟರ್ ನಲ್ಲಿ ಪಬ್ಲಿಶ್ ಮಾಡಿದ ಕೆಲ ನಿಮಿಷಗಳ ನಂತರ ಡಿಲೀಟ್ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದರು. 22 ವರ್ಷದ ಹುಡುಗಿಯ ಬಂಧವನ್ನು ಖಂಡಿಸಿ ದೇಶಾದ್ಯಂತ  ಪರಿಸರ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು 

ದಿಶಾ ಜೊತೆಗೆ ಸಂಪರ್ಕ ಹೊಂದಿದ್ದ ಪರಿಸರದ ಕಿರಿಯ ಕಾರ್ಯಕರ್ತೆಯರ  ಹುಡುಕಾಟದಲ್ಲಿ ದೆಹಲಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಒಬ್ಬಳು ಮಹಾರಾಷ್ಟ್ರ  ಮೂಲದ ನಿಕಿತಾ ಜಾಕೋಬ್, ಮತ್ತೊಬ್ಬಳು ಬೀಡ್ ಮೂಲದ ಶಂತಾನು ಮುಲುಕ್. ಕಾಣೆಯಾದ ಕಾರಣದಿಂದಾಗಿ ಆರೋಪಿಗಳ ವಿರುದ್ಧ ಪೊಲೀಸರು ಜಾಮೀನು ರಹಿತ ವಾರೆಂಟ್ ಸಂಗ್ರಹಿಸಿದ್ದಾರೆ.