ನಿರ್ಭಯಾ ಪ್ರಕರಣ; ಸುಪ್ರೀಂ ಮೆಟ್ಟಿಲೇರಿದ ಕೇಂದ್ರ ಸರ್ಕಾರ....

ಇಡೀ ಭಾರತ ದಲ್ಲೆ ಸದ್ದು ಮಾಡಿದ್ದ ನಿರ್ಭಯಾ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ 4 ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಈಗಾಗಲೇ ಗಲ್ಲು ಶಿಕ್ಷೆ ನೀಡಿತ್ತು. ಆದರೆ ಹಲವು ಕಾನೂನು ಪ್ರಕ್ರಿಯೆಗಳಿಂದಾಗಿ ಅಪರಾಧಿಗಳ ಗಲ್ಲು ಶಿಕ್ಷೆ ವಿಳಂಬವಾಗುತ್ತಿದ್ದು,ಈ ವಿಚಾರದಲ್ಲಿ ಕೇಂದ್ರ ಸರ್ಕಾರ  ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ .ಅಪರಾಧಿಗಳನ್ನು ಏಕೆ ಪ್ರತ್ಯೇಕವಾಗಿ ನೇಣಿಗೆ ಹಾಕಬಾರದು...? ಎಂದು ಹೈಕೋರ್ಟ್ ನ ಆದೇಶವನ್ನು ಪ್ರಶ್ನೆ ಮಾಡಿದೆ.

ನಾಲ್ವರು ಅಪರಾಧಿಗಳಾದ  ಮುಕೇಶ್ ಸಿಂಗ್,ಪವನ್ ಗುಪ್ತಾ,ವಿನಯ್ ಕುಮಾರ್ ಶರ್ಮ,ಮತ್ತು ಅಕ್ಷಯ್ ಕುಮಾರ್ ಸಿಂಗ್ ನ್ನು ಒಟ್ಟಿಗೆ ನೇಣು ಹಾಕಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿತ್ತು.ಪ್ರತ್ಯೇಕ ನೇಣು ಹಾಕಲು ಅವಕಾಶ ನೀಡುವಂತೆ ಸಲ್ಲಿಸಿದ ಅರ್ಜಿಯನ್ನು ತಳ್ಳಿ ಹಾಕಿತ್ತು. ಈ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿದೆ.ನಾಲ್ವರು ಅಪರಾಧಿಗಳ ಪೈಕಿ ಮೂವರ ಕ್ಷಮಾದಾನ ಅರ್ಜಿಯನ್ನು  ರಾಷ್ಟ್ರಪತಿಗಳು ಈಗಾಗಲೇ ತಿರಸ್ಕರಿಸಿದ್ದಾರೆ.