ಗೋವಾದಲ್ಲಿ ಅಂತರಾಷ್ಟೀಯ ಚಲನಚಿತ್ರೋತ್ಸವ : ಆನ್ಲೈನ್ ವೀಕ್ಷಣೆಗೆ ಅವಕಾಶ
ಜನವರಿ 16 ರಿಂದ 24ರ ವರೆಗೆ ಗೋವಾದಲ್ಲಿ ನಡೆಯಲಿರುವ 51 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ಚಿತ್ರಗಳ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜವಡೆಕರ್ ಮಾಹಿತಿ ನೀಡಿದ್ದಾರೆ.
ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಇಂಡಿಯನ್-ಪೊನಾರಂ ವಿಭಾಗಕ್ಕೆ ಆಯ್ಕೆಯಾದ ಚಿತ್ರಗಳನ್ನು ಪ್ರಕಟಿಸುವುದರ ಮೂಲಕ ಸಿನಿರಸಿಕರ ಗಮನವನ್ನು ಚಲನಚಿತ್ರೋತ್ಸವದತ್ತ ಸೆಳೆದಿದ್ದಾರೆ.
ಈ ವರ್ಷ ನಡೆಯಬೇಕಿದ್ದ ಹಲವು ಪ್ರಮುಖ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳು ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದವು. ಕೆಲವೊಂದು ಚಿತ್ರೋತ್ಸವಗಳನ್ನು ಆನ್ಲೈನ್ ಹಾಗು ಹೈಬ್ರಿಡ್ ಮಾದರಿಯಲ್ಲಿ ಆಚರಿಸಲಾಗಿತ್ತು. ಇದೀಗ ಇಂಟರನ್ಯಾಷನಲ್ ಫಿಲ್ಮ ಫೆಷ್ಟಿವಲ್ ಆಫ್ ಇಂಡಿಯಾ ಹೈಬ್ರಿಡ್ ಮಾದರಿಯಲ್ಲಿಯೇ ಈ ಚಿತ್ರೋತ್ಸವ ನಡೆಯಲಿದ್ದು ಕೇವಲ 200 ಜನರಿಗೆ ಮಾತ್ರ ಚಿತ್ರೋತ್ಸವಕ್ಕೆ ನೇರ ಪ್ರವೇಶ ದೊರೆತಿದೆ. ಉಳಿದಂತೆ ಚಿತ್ರ ವೀಕ್ಷಣೆಯ ಅವಕಾಶವನ್ನು ಆನ್ಲೈನ್ ಮೂಲಕ ಕಲ್ಪಿಸಲಾಗಿದೆ.
ಒಟ್ಟು 8 ದಿನಗಳು ನಡೆಯುವ ಈ ಉತ್ಸವದಲ್ಲಿ ಇಂಡಿಯನ್-ಪೊನಾರಂ ವಿಭಾಗಲ್ಲಿ 23 ಚಿತ್ರಗಳು ಮತ್ತು 20 ಸಾಕ್ಷಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಿತ್ರೋತ್ಸವದ ಪ್ರಮುಖ ಪ್ರತಿನಿಧಿಗಳ ಆಯ್ಕೆಯ ಮೇರೆಗೆ ಚಲನಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಈಎಫ್ ಎಫ್ ಐ ತಿಳಿಸಿದೆ.
ವರದಿ : ವಿಜಯ್ ಬಾಸ್ಕರ್