ಪಶ್ಚಿಮ ಬಂಗಾಳದ ಚುನಾವನೆಯಲ್ಲಿ ಬಿಜೆಪಿ ಎರಡು ಅಂಕಿಯನ್ನು ದಾಟಲ್ಲ : ಪ್ರಶಾಂತ ಕಿಶೋರ

ಪಶ್ಚಿಮ ಬಂಗಾಳದ ವಿಧಾನಸಭೆ  ಚುನಾವಣೆಯಲ್ಲಿ ಬಿಜೆಪಿ ಎರಡು ಅಂಕಿಯನ್ನು ದಾಟಲ್ಲ ಎಂದು ರಾಜಕೀಯ ತಂತ್ರಗಾರ ಪ್ರಶಾಂತ ಕಿಶೋರ ಹೇಳಿದ್ದಾರೆ. ಬಂಗಾಳದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ನ ಉಸ್ತುವಾರಿಯನ್ನು ಮಮತಾ ಬ್ಯಾನರ್ಜಿ ಪ್ರಶಾಂತ್‌ ಕಿಶೋರವರಿಗೆ ನೀಡಿದ್ದಾರೆ.

ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರೋಡ್‌ ಶೋ ನಡೆಸಿದ್ದರು. ಈ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್‌ ನ ಕೆಲವು ನಾಯಕರನ್ನು ಬಿಜೆಪಿಗೆ ಸೆಳೆಯುವಲ್ಲಿ ಶಾ ಯಶಸ್ವಿಯಾಗಿದ್ದರು. “ಮಾಧ್ಯಮಗಳು  ಕೆಲವು ಪಕ್ಷಗಳ ಪರವಾಗಷ್ಟೇ ಪ್ರಚಾರ ಮಾಡುತ್ತಿವೆ, ಆದರೆ ವಾಸ್ತವದಲ್ಲಿ ಬಿಜೆಪಿ ಎರಡು ಅಂಕಿಗಳನ್ನು ದಾಟಲು ಕಷ್ಟಪಡಬೇಕಾದೀತು. ಒಂದು ವೇಳೆ ಹೀಗಾಗದಿದ್ದರೆ ನಾನು ಟ್ವೀಟ್ಟರ್‌ನಿಂದ ಹೊರ ಹೊರಹೋಗುತ್ತೇನೆ ಎಂದು ಟ್ವೀಟ್‌ ಮಾಡುವ ಮೂಲಕ ಬಿಜೆಪಿಗೆ ಸವಾಲೊಡ್ದಿದ್ದಾರೆ ಪ್ರಶಾಂತ್.

 

 

ಇದಕ್ಕೆ ಪ್ರತ್ಯುತ್ತರವಾಗಿ ಹಿರಿಯ ಬಿಜೆಪಿ ನಾಯಕರಾದ  ಕೈಲಾಶ ವಿಜಯವರ್ಗೀಯಾ ಪ್ರತಿಕ್ರಿಯಿಸಿದ್ದು” ಸದ್ಯಕ್ಕಿರುವ ಬಿಜೆಪಿಯ ಅಲೆಯನ್ನು ಗಮನಿಸುವುದಾದರೆ. ನಾವು ಬಂಗಾಳದಲ್ಲಿ ಸರ್ಕಾರ ರಚಿಸಲಿದ್ದೇವೆ, ಹಾಗೂ ದೇಶ ಒಬ್ಬ ರಾಜಕೀಯ ತಂತ್ರಗಾರನನ್ನು ಕಳೆದುಕೊಳ್ಳಲಿದೆ” ಎಂದು ವ್ಯಂಗ್ಯ ಮಾಡಿದ್ದಾರೆ.

2016ರ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 294 ಸ್ಥಾನಗಳಲ್ಲಿ ಕೇವಲ ಆರು ಸ್ಥಾನಗಳನ್ನು ಗೆಲುವು ಸಾಧಿಸಿದ್ದು  ಮಮತಾ ಬ್ಯಾನರ್ಜಿ  ಎರಡನೇ ಬಾರಿಗೆ ಅಧಿಕಾರಕ್ಕೇರಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ 18 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಅಲ್ಲದೇ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ನ‌ ಪ್ರಭಾವವು ಕಡಿಮೆಯಾಗಿದೆ ಎಂಬ ವಿಶ್ವಾಸ ಬಿಜೆಪಿಗಿದೆ. ಹಾಗಾಗಿ ತೃಣಮೂಲ ಕಾಂಗ್ರೇಸನ್ನು ಸೋಲಿಸಲು ಬಿಜೆಪಿಗೆ ಸುಲಭ ಮಾರ್ಗ ಸಿಕ್ಕಂತಾಗಿದೆ.


ವರದಿ: ಮಂಜುನಾಥ ನಾಯಕ