ಬೆಂಗಳೂರಿನ ಬಸವ ಭವನದಲ್ಲಿ ಕಾಯಕಯೋಗಿ ಬಸವಣ್ಣನವರ ಜಯಂತಿ ಆಚರಣೆ....

ಇಂದು ಹನ್ನೇರಡನೇ ಶತಮಾನದ ಸಾಮಾಜಿಕ ಸುಧಾರಕ , ಕಾಯಕಯೋಗಿ ಬಸವಣ್ಣನವರ 887 ನೇ ಜಯಂತಿಯನ್ನು ಬೆಂಗಳೂರಿನ ಬಸವ ಭವನದಲ್ಲಿ ಸರಳವಾಗಿ ಆಚರಿಸಲಾಯಿತು. 

ಹನ್ನೇರಡನೇ ಶತಮಾನದಲ್ಲಿ ಜನಿಸಿದ್ದ ವಿಶ್ವಗುರು ಬಸವಣ್ಣನವರು ಕಲ್ಯಾಣ ನಾಡಿನ ಬಿಜ್ಜಳ ಅರಸನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 
ಈ ಸಮಯದಲ್ಲಿ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಅಸ್ಪ್ರಶ್ಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು. ಅಂತರ್ಜಾತಿ ವಿವಾಹಗಳ ಮೂಲಕ ಜಾತಿ ವ್ಯವಸ್ಥೆಯ ಬದಲಾವಣೆಗೆ ದೊಡ್ಡ ಕ್ರಾಂತಿಯನ್ನೇ ಮಾಡಿದ್ದರು. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಕಾಯಕದ ಮಹತ್ವ ತಿಳಿಸಿದ್ದರು. ವಿಶ್ವದ ಮೊದಲ ಸಂಸತ್ ಎಂದೇ ಕರೆಯಲಾಗುವ ಅನುಭವ ಮಂಟಪವನ್ನು ಸ್ಥಾಪಿಸಿ ಜಗತ್ತಿಗೆ ಪ್ರಜಾಪ್ರಭುತ್ವದ ಸಂದೇಶ ಸಾರಿದ್ದರು. ವಚನ ಸಾಹಿತ್ಯದ ಮೂಲಕ ಸಾಮಾನ್ಯ ಜನರಿಗೆ ಜೀವನ ಪಾಠ ಹೇಳಿದ ಸಾಹಿತಿ. ಸಮಾಜದಲ್ಲಿನ ಮೂಢನಂಬಿಕೆ ಹೋಗಲಾಡಿಸಿದ ಕ್ರಾಂತಿಕಾರಿ.

ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಯಿ, ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ರಾಜೇಂದ್ರ ಶ್ರೀಗಳು, ಕೂಡಲ ಸಂಗಮದ ಜಯಮೃಂತ್ಯುಂಜಯ ಸ್ವಾಮೀಜಿಗಳು, ಕೆಪಿಸಿಸಿ ಕಾರ್ಯಾಧ್ಯಕ್ಷ  ಸಲೀಂ ಅಹಮದ್ ಭಾಗವಹಿಸಿದ್ದರು.