ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ತಯಾರಿ : ಮೋದಿ ಕ್ಯಾಬಿನೆಟ್ ನಲ್ಲಿ ವೈಎಸ್ ಆರ್ ಹಾಗೂ ಜೆಡಿಯು ಸಂಸದರಿಗೆ ಸ್ಥಾನ ಸಾಧ್ಯತೆ...
ನವದೆಹಲಿ : ದೆಹಲಿ ವಿಧಾನಸಭೆ ಸೋಲಿನ ಬಳಿಕ ಬಿಜೆಪಿ ಸದ್ಯ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಡುವ ತಯಾರಿಯಲ್ಲಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿರುವುದು ಸದ್ಯ ಈ ಅನುಮಾನ ಮೂಡಲು ಕಾರಣವಾಗಿದೆ.ಜಗನ್ ಭೇಟಿ ಹಾಗೂ ವೈಎಸ್ ಆರ್ ಸಂಸದರು ಮೋದಿ ಕ್ಯಾಬಿನೆಟ್ ಸೇರುವುದನ್ನು ತಳುಕು ಹಾಕಲಾಗುತ್ತಿದೆ.
ಬಜೆಟ್ ಅಧಿವೇಶನದ ನಂತರ ಕ್ಯಾಬಿನೆಟ್ ವಿಸ್ತರಣೆ ನಡೆಯಲಿದ್ದು, ಅದಕ್ಕೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ. ಇನ್ನು ವೈಎಸ್ ಆರ್ ಪಕ್ಷದ ಸಂಸದರ ಜೊತೆಗೆ ಬಿಹಾರದ ಜೆಡಿಯು ಪಕ್ಷದ ಸಂಸದರು ಕೂಡ ಮೋದಿ ಸಂಪುಟ ಸೇರುವ ನಿರೀಕ್ಷೆ ಇದೆ. ಮುಂಬರುವ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಯು ಮೈತ್ರಿ ಅತ್ಯವಶ್ಯಕ. ಹಾಗಾಗಿ ನಿತೀಶ್ ಕುಮಾರ್ ಸಂಸದರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಬಿಜೆಪಿ ಚಿಂತನೆ ನಡೆಸಿದೆ.
ಈಗಾಗಲೇ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಸೋಲುಂಡಿರುವ ಬಿಜೆಪಿ ಮುಂಬರುವ ಚುನವಣೇಗಳನ್ನಾದರೂ ಗೆಲ್ಲುವ ಪ್ರಯತ್ನದಲ್ಲಿದೆ.ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ಸೇತರ ವಿಪಕ್ಷಗಳು ಒಂದಾಗುವ ಸಾಧ್ಯತೆ ಇದ್ದು, ಪ್ರಾದೇಶಿಕ ಪಕ್ಷಗಳ ಜೊತೆಗಿನ ಮೈತ್ರಿಯನ್ನು ಕಾಪಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಬಿಜೆಪಿಗಿದೆ.ಆದ್ದರಿಂದ ತನ್ನ ಮೈತ್ರಿ ಪಕ್ಷಗಳ ಸಂಸದರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ, ಪಕ್ಷಗಳ ಜೊತೆಗಿನ ತನ್ನ ಸಭಂಧವನ್ನು ಉತ್ತಮಗೊಳಿಸಲು ಬಿಜೆಪಿ ಹೊರಟಿದೆ.