ಮರಾಠಾ ನಿಗಮ ಸ್ಥಾಪನೆ ಖಂಡಿಸಿ ಜನವರಿ 30ಕ್ಕೆ ರೈಲು ತಡೆ
ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಖಂಡಿಸಿ ಜನವರಿ 30ಕ್ಕೆ ರೈಲು ತಡೆ ನಡೆಸುವಾದಾಗಿ ವಾಟಾಳ್ ನಾಗಾರಾಜ್ ನೆತೃತ್ವದ ಒಕ್ಕೂಟದ ನಿರ್ಧಾರ ಮಾಡಿದೆ. ಜನವರ 9 ರಂದು ಬೆಳೆಗೆ 11 ಗಂಟೆಗೆ ಬೆಂಗಳೂರಲ್ಲಿ ಪ್ರತಿಭಟನೆ ಆರಂಭವಾಗಲಿದೆ.
ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಐವತ್ತು ಕೋಟಿ ಅನುದಾನವನ್ನು ನೀಡಿತ್ತು. ಈ ಹಿನ್ನಲೆಯಲ್ಲಿ ಡಿಸೆಂಬರ್ 5 ರಂದು ಕನ್ನಡ ಪರ ಸಂಘಟನೆಗಳ ಬಂದ್‌ಗೆ ಕರೆ ನೀಡಿದ್ದವು. ಆದರೆ ಬಂದ್‌ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಾಟಾಳ್ ನಾಗಾರಾಜ್ ನೆತೃತ್ವದಲ್ಲಿ ಬೆರೆಳೆಣಿಕೆಯಷ್ಟು ಸಂಘಟನೆಗಳು ಬೆಂಗಳೂರಿನ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸಿದ್ದವು. ಈಗ ಇದೇ ವಿಷವಯವಾಗಿ ವಾಟಾಳ್ ನಾಗಾರಾಜ್ ನೆತೃತ್ವದ ಒಕ್ಕೂಟ ಮತ್ತೆ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದೆ.
ವರದಿ: ಮಂಜುನಾಥ ನಾಯಕ್