ಕರೋನಾ ಹಿರೋಗೊಂದು ದೇವಸ್ಥಾನ ..

ತೆಲಂಗಾಣದ ಸಿದ್ಧಿಪೇಟೆ ಜಿಲ್ಲೆಯ ಜನರು ಕೊರೊನ ಲಾಕ್‌ಡೌನಲ್ಲಿ ಬಾಲಿವುಡ್‌ ನಟ ಸೋನು ಸೂದ್‌ ಮಾಡಿದ ಸಹಾಯವನ್ನು ನೆನೆದು ದೇವಸ್ಥಾನವೊಂದನ್ನು ಕಟ್ಟಿಸಿದ್ದಾರೆ. ಸೋನು ಸೂದರ್‌ ಮೂರ್ತಿಯಿರುವ ದೇವಸ್ಥಾನವನ್ನು ಗ್ರಾಮದ ಜನರ ಸಮ್ಮುಖದಲ್ಲಿ ಉದ್ಘಾಟಿಸಲಾಗಿದೆ.

ʼಸೋನು ಸೂದ ಕೊರೊನಾ ಸಂದರ್ಭದಲ್ಲಿ ಜನರಿಗೊಸ್ಕರ ತುಂಬಾ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ.  ಅವರ ಉತ್ತಮ ಕಾರ್ಯಗಳಿಂದ ಅವರು ದೇವರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ನಾವು ಅವರಿಗೋಸ್ಕರ ದೇವಸ್ಥಾನ ಕಟ್ಟಿಸಿದ್ದೇವೆ. ಅವರು ನಮಗೆ ದೇವರ ಸಮಾನʼ ಎಂದು ಜಿಲ್ಲಾ ಪಂಚಾಯತ್‌ ಸದಸ್ಯರಾದ ಗಿರಿ ಕೊಂಡಾಲ್‌ ರೆಡ್ದಿ ಹೇಳಿದ್ದಾರೆ.

ʼಸೋನು ಸೂದ್‌ ತಮ್ಮ ಸಹಾಯ ಮಾಡುವ ಗುಣಗಳಿಂದ ಜನರ ಹೃದಯದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಅವರಿಗೋಸ್ಕರ ನಾನು ಕೂಡ ಒಂದು ಚಿಕ್ಕ ಮೂರ್ತಿಯನ್ನು ತಯಾರು ಮಾಡಿದ್ದೇನೆʼ ಎಂದು ಸೋನು ಸೂದ್‌ರ ಮೂರ್ತಿ ಕೆತ್ತನೆ ಮಾಡಿದ ಶಿಲ್ಪಿ ಮಧುಸೂದನ್‌ ಪಾಲ್‌ ಹೇಳಿದ್ದಾರೆ.

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸೋನು ಸೂದ್‌ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದರು. ಸರಿಯಾದ ಸಾರಿಗೆಯಿಲ್ಲದೇ ತಮ್ಮ ಮನೆಗಳಿಗೆ ಹೊಗಲು ಕಷ್ಟಪಡುತ್ತಿದ್ದ ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡಿದ್ದರು. ಹಸಿವಿನಿಂದ ಬಳಳುತ್ತಿದ್ದ ಜನರಿಗೆ ಆಹಾರ ಮತ್ತು ನೀರು ಒದಗಿಸುವ ಕಾರ್ಯ ಮಾಡಿದ್ದರು. ಸೋನು ಸೂದ್‌ರ ಈ ಕಾಳಜಿಗೆ ಜನರಿಂದ ಭಾರಿ ಪ್ರಶಂಸೆ ಕೇಳಿ ಬಂದಿತ್ತು.  ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ ಸಿಂಗ್‌ ಕೋಶ್ಯಾರಿ ಕೂಡ ಸೋನು ಸೂದ್ರ‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇತ್ತಿಚಿಗೆ ಸೋನು ಸೂದ್  ಉದ್ಯೋಗ ಒದಗಿಸುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ವಲಸೆ ಕಾರ್ಮಿಕರ ಮಕ್ಕಳಿಗೆ ಸಹಾಯವಾಗುವಂತೆ ಜಾಲವೊಂದನ್ನು ಆರಂಭಿಸಿದ್ದಾರೆ. ಇನ್ನೂ ಕೊರೊನಾ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಳ್ಳಲು ʼಆಯ್‌  ಯಾಮ್‌ ನೋ ಮೆಸಿಹಾʼ ಎಂಬ ಪುಸ್ತಕವನ್ನೂ ಬರೆಯುತ್ತಿದಾರೆ.


ವರದಿ: ಮಂಜನಾಥ ನಾಯಕ